ಮೈಸೂರು: ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆ ಮಧ್ಯೆ ರಾಗಿ,ಹುರುಳಿ ಸೆತ್ತೆ ಹಾಕುವುದರಿಂದ ವಾಹನಸವಾರರ ಪ್ರಾಣಕ್ಕೆ ಕುತ್ತು ತರುವ ಅನೇಕ ಪ್ರಕರಣ ನಡೆಯುತ್ತಲೇ ಇವೆ.
ನಡುರಸ್ತೆಯಲ್ಲಿ ಕಾರು ಸುಟ್ಟು ಕರುಕಲಾದ ಘಟನೆ ಸರಗೂರು ತಾಲೂಕಿನ ಯಶವಂತಪುರ ಗ್ರಾಮದ ಮುಖ್ಯರಸ್ತೆಯಲ್ಲಿ ನಡೆದಿದೆ.
ಧಾರ್ಮಿಕ ಕ್ಷೇತ್ರ ಶ್ರೀ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು,ಕೆ.ಆರ್.ನಗರಕ್ಕೆ ಸೇರಿದ ಕಾರು ಎಂದು ಗೊತ್ತಾಗಿದೆ.
ರಸ್ತೆ ಮಧ್ಯೆ ರಾಗಿ ಹಾಗೂ ಹುರುಳಿ ಒಕ್ಕಣೆ ಮಾಡುತ್ತಿರುವುದರಿಂದ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಾರಿಗೆ ಒಕ್ಕಣೆ ಮಾಡುವ ಸತ್ತೆ ಸಿಲುಕಿ ಬೆಂಕಿ ಕಾಣಿಸಿಕೊಂಡಿದೆ,ಮಧ್ಯರಾತ್ರಿ ವೇಳೆ ಘಟನೆ ನಡೆದ ಕಾರಣ ಬೆಂಕಿ ಇಡೀ ಕಾರನ್ನೇ ಸುಟ್ಟು ಭಸ್ಮ ಮಾಡಿದೆ.
ಸಧ್ಯ ರಾಜ್ಯ ಹೆದ್ದಾರಿಯಲ್ಲಿ ಕಾರು ಅನಾಥವಾಗಿ ಸುಟ್ಟು ಕರುಕಲಾದ ಸ್ಥಿತಿಯಲ್ಲಿ ನಿಂತಿದೆ,ಆದರೆ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.