Wed. Dec 25th, 2024

ಕಾವೇರಿ ಚಳವಳಿ:ಕಾವೇರಿ ಕ್ರಿಯಾ ಸಮಿತಿ ವತಿಯಿಂದ ನಾಳೆ‌ ಮಾನವ ಸರಪಳಿ

Share this with Friends

ಮೈಸೂರು, ಫೆ.22: ಕಾವೇರಿ ಕ್ರಿಯಾ ಸಮಿತಿ ವತಿಯಿಂದ ನಾಳೆ‌ ಬೆಳಿಗ್ಗೆ ಮೈಸೂರಿನ‌ ದೊಡ್ಡ ಗಡಿಯಾರದ ಬಳಿ‌ ಮಾನವ ಸರಪಳಿ ಹಮ್ಮಿಕೊಳ್ಳಲಾಗಿದೆ.

ಸಮಿತಿಯು ಶತದಿನ ಆಚರಿಸಿದ ಸಂದರ್ಭದಲ್ಲಿ ,ಕಾವೇರಿ ಚಳವಳಿಯನ್ನು ಜೀವಂತವಾಗಿಡಲು ವಾರಕ್ಕೊಂದು ದಿನ ಅಂದರೆ ಪ್ರತಿ ಶುಕ್ರವಾರ ಪ್ರತಿಭಟನೆ ನಡೆಸಲು ಇಂದು ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಎಸ್ ಜಯಪ್ರಕಾಶ್ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ 11 ಗಂಟೆಯಿಂದ ಎಂದಿನಂತೆ ದೊಡ್ಡ ಗಡಿಯಾರದ ಮುಂಭಾಗದಲ್ಲಿರುವ ಕಾವೇರಿ ವೇದಿಕೆಯಲ್ಲಿ ಧರಣಿ ಸತ್ಯಾಗ್ರಹ, ಸಹಿ ಸಂಗ್ರಹ ಚಳವಳಿ ಜೊತೆಗೆ 12 ಗಂಟೆಗೆ ಮಾನವ ಸರಪಳಿ ನಡೆಸಲಾಗುವುದೆಂದು ಹೇಳಿದ್ದಾರೆ.

ಸಭೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹೆಚ್. ಕೆ ರಾಮು, ತೇಜೇಶ್ ಲೋಕೇಶ್ ಗೌಡ, ರಾಜಶೇಖರ್, ಟೈಗರ್ ಬಾಲಾಜಿ ಶಿವಲಿಂಗಯ್ಯ, ಬೋಗಾದಿ ಸಿದ್ದೇಗೌಡ, ಕೃಷ್ಣಯ್ಯ, ನಾಗರಾಜ್ , ಆಟೋಮಹದೇವು, ನಾಗಣ್ಣ, ಪ್ರಭಾಕರ , ವಿಷ್ಣು, ಬಾಲಕೃಷ್ಣ, ಭಾಗ್ಯಮ್ಮ, ಪುಷ್ಪವತಿ, ಮಂಜುಳಾ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post