ಮೈಸೂರು, ಜೂನ್.1: ತಮಿಳುನಾಡಿನಲ್ಲಿ ಸಾಕಷ್ಟು ನೀರಿದ್ದರೂ ಕಾವೇರಿ ನ್ಯಾಯ ಮಂಡಳಿ ಮೇಲೆ ಒತ್ತಡ ಹೇರಿ ಪದೇ ಪದೇ ಕಾವೇರಿ ನೀರನ್ನು ಹರಿಸಿಕೊಳ್ಳಲಾಗುತ್ತಿದೆ ಎಂದು ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯಪ್ರಕಾಶ್ ಖಂಡಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ದೂರು ನೀಡಲಿರುವ ಅರ್ಜಿಗಳಿಗೆ ಇಂದು ದೊಡ್ಡ ಗಡಿಯಾರದ ಮುಂಭಾಗ ಸಾರ್ವಜನಿಕ ರಿಂದ ಸಹಿ ಸಂಗ್ರಹದ ವೇಳೆ ಅವರು ಮಾತನಾಡಿದರು.
ಎರಡು ರಾಜ್ಯಗಳ ಜನರು ಸಹ ಬಾಳ್ವೆ ಮಾಡಬೇಕಾಗಿರುವುದರಿಂದ, ಇನ್ನಾದರೂ ಕಾವೇರಿ ನೀರು ವಿಚಾರದಲ್ಲಿ ಬಲವಂತವಾಗಿ, ಅವೈಜ್ಞಾನಿಕವಾಗಿ ನೀರನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕೆಂದು ತಮಿಳುನಾಡು ರಾಜಕಾರಣಿಗಳನ್ನು ಜಯಪ್ರಕಾಶ್ ಒತ್ತಾಯಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಲಯ ಉಪಾಧ್ಯಕ್ಷರಾದ ಡಾ. ಬಿ. ಆರ್ ನಟರಾಜ್ ಜೋಯ್ಸ್ ಮಾತನಾಡಿ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಕಾವೇರಿ ನೀರಿನ ವಿಚಾರದಲ್ಲಿ ಮಲತಾಯಿ ಧೋರಣೆಯನ್ನು ತೋರುತ್ತಿದ್ದು, ಇದರ ಪರಿಣಾಮವನ್ನು ಜನರಿಂದ ಅನುಭವಿಸಲಿದ್ದಾರೆ ಎಂದು ಎಚ್ಚರಿಸಿದರು.
ಕಾವೇರಿ ಕ್ರಿಯಾಸಮಿತಿಯ ತೇಜೇಶ್ ಲೋಕೇಶ್ ಗೌಡ, ನಾಗರಾಜ್ ಜಿ, ಸಿಂದುವಳ್ಳೀ ಶಿವಕುಮಾರ್ ಸರ್ಕಾರದ ನಡೆಯನ್ನು ಖಂಡಿಸಿ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿದರು
ಸಿ ಹೆಚ್ ಕೃಷ್ಣಯ್ಯ, ವರುಕೂಡು ಕೃಷ್ಣೇಗೌಡ , ರಾಜಶೇಖರ್,ಕುಮಾರ್ ಗೌಡ, ನೇಹಾ, ಪ್ರಭುಶಂಕರ, ಹನುಮಂತಯ್ಯ, ಮಹೇಶ್ ಗೌಡ, ಆಟೋ ಮಹಾದೇವ, ಪುಷ್ಪವತಿ, ಶುಭಶ್ರೀ, ಭಾಗ್ಯಮ್ಮ, ಸ್ವಾಮಿ ಗೌಡ, ಹನುಮಂತೇಗೌಡ, ಹೊನ್ನೇಗೌಡ , ವಿಷ್ಣು, ಸಂಜಯ್ ಮತ್ತಿತರರು ಪಾಲ್ಗೊಂಡಿದ್ದರು.