ಮೈಸೂರು,ಫೆ.25: ಮೈಸೂರಿನಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಾರಕಾಸ್ತ್ರಗಳ ಸಮೇತ ರೌಡಿ ಶೀಟರ್ ಒಬ್ಬನನ್ನು ಬಂಧಿಸಿದ್ದಾರೆ.
ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ಜಾವೆದ್ ಖಾನ್@ ಸೈನೆಡ್ ಜಾವೆದ್ (42)
ಬಂಧಿತ ರೌಡಿ ಶೀಟರ್.
ಈತನ ಮೇಲೆ ಈಗಾಗಲೇ ಹಲವು ಪ್ರಕರಣಗಳಿದ್ದರೂ ಮತ್ತೊಂದು ಕೃತ್ಯಕ್ಕೆ ಸಂಚು ಹಾಕುತ್ತಿದ್ದ ವೇಳೆ ಸಿಸಿಬಿ ಪೊಲೀಸರು ದಾಳಿ ಮಾಡಿ ಸೆರೆಹಿಡಿದರು.
ಸಿಕ್ಕಿಬಿದ್ದ ವೇಳೆ ಜಾವೇದ್ ಖಾನ್ ಬಳಿ ವಿವಿದ ನಮೂನೆಯ ಮೂರು ಡ್ರಾಗರ್ ಗಳ ದೊರೆತಿದೆ.ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸಿಸ್ ನಲ್ಲಿ ಡ್ರಾಗರ್ ಗಳನ್ನ ಇಟ್ಟುಕೊಂಡಿದ್ದ ವೇಳೆ ರೆಡ್ ಹ್ಯಾಂಡಾಗಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಠಾಣೆಗೆ ಕರೆಸಿ ಎಚ್ಚರಿಕೆ ಕೊಡುವ ಬದಲು ರೌಡಿಶೀಟರ್ ಗಳು ಇರುವ ಸ್ಥಳವನ್ನೇ ಹುಡುಕಿಕೊಂಡು ಹೋಗಿ ಪರಿಶೀಲನೆ ಮಾಡುವ ಜವಾಬ್ದಾರಿಯನ್ನ ಸಿಸಿಬಿ ಪೊಲೀಸರಿಗೆ ನೀಡಲಾಗಿದೆ.
ಫೆ.23 ರ ರಾತ್ರಿ ಎನ್.ಆರ್.ಪೊಲೀಸ್ ಠಾಣಾ ವ್ಯಾಪ್ತಿಯ ಉನ್ನತಿನಗರದಲ್ಲಿ ಇನ್ಸ್‌ಪೆಕ್ಟರ್ ಪೂವಯ್ಯ ಮತ್ತು ಟೀಂ ರೌಂಡ್ಸ್ ಮಾಡುತ್ತಿದ್ದ ವೇಳೆ ಜಾವೆದ್ ಖಾನ್ ಮಾರಕಾಸ್ತ್ರಗಳ ಸಮೇತ ಬಿದ್ದಿದ್ದಾನೆ.
2019 ರಲ್ಲಿ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾವೆದ್ ಖಾನ್ ಪಿಸ್ತೂಲ್ ಮಾರಾಟ ಮಾಡುವ ಯತ್ನದಲ್ಲಿ ತಂಡದಲ್ಲಿದ್ದ ವೇಳೆ ಸಿಕ್ಕಿಬಿದ್ದಿದ್ದ.
ಬೆಂಗಳೂರು ಸಿಸಿಬಿ ಪೊಲೀಸರು ಜಾವೆದ್ ಖಾನ್ ಸೇರಿದಂತೆ 6 ಮಂದಿಯನ್ನ ಬಂಧಿಸಿದ್ದರು.ಆರೋಪಿಗಳಿಂದ ಮೂರು ಪಿಸ್ತೂಲ್,ಒಂದು ರಿವಾಲ್ವರ್ ಹಾಗೂ 8 ಜೀವಂತಗುಂಡುಗಳನ್ನ ವಶಪಡಿಸಿಕೊಂಡಿದ್ದರು.
ಸಧ್ಯ ಈ ಪ್ರಕರಣದಲ್ಲಿ ಜಾವೆದ್ ಆರೋಪಿಯಾಗೇ ಇದ್ದಾನೆ.ಅಲ್ಲದೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 307 ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ಈತನ ಮೇಲಿದೆ.ಇದೀಗ ಜಾವೇದ್ ಖಾನ್ ಎನ್.ಆರ್.ಠಾಣೆ ಪೊಲೀಸರ ಅತಿಥಿಯಾಗಿದ್ದಾನೆ.
ನಗರಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್, ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ಉಸ್ತುವಾರಿಯಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಪೂವಯ್ಯ ನೇತೃತ್ವದಲ್ಲಿ ಪಿಎಸ್ಸೈ ರಾಜು ಕೊನಕೇರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಜಾವೇದ್ ಖಾನ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.