Fri. Jan 10th, 2025

ವಿವೇಕಾನಂದ ಗೆಲುವಿಗೆ ಮೈಸೂರಿನಲ್ಲಿ ಸಂಭ್ರಮ

Share this with Friends

ಮೈಸೂರು, ಜೂ.6: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆ.ಡಿ.ಎಸ್, ಬಿ.ಜೆ.ಪಿ ಮೈತ್ರಿ ಅಭ್ಯರ್ಥಿ ಕೆ ವಿವೇಕಾನಂದ ಭರ್ಜರಿ ಗೆಲುವು ಸಾಧಿಸಿದ್ದಕ್ಕೆ ಕಾರ್ಯಕರ್ತರು ಸಂಭ್ರಮಿಸಿದರು.

ಸಾ.ರಾ. ಮಹೇಶ್ ಸ್ನೇಹ ಬಳಗದವರು ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾದರ್ಶನ್, ಮೈಸೂರ್ ನಗರ ಉಪಾಧ್ಯಕ್ಷ ಜಿ. ಯದುನಂದನ್, ನಗರ ಕಾರ್ಯದರ್ಶಿ ರಾಧಾಕೃಷ್ಣ,ಬಿಜೆಪಿ ಮುಖಂಡರುಗಳಾದ ದಿವಾಕರ್ ಆರಾಧ್ಯ,ಟೈಲರ್ ಮಹದೇವ್, ಆಟೋ ಶಂಕರ್, ಅಪ್ಪಾಜಿಗೌಡ ಸಿದ್ದರಾಜು, ಜೋಗಿ ನಾಗರಾಜು ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post