Tue. Dec 24th, 2024

ಚಾಮುಂಡಿಬೆಟ್ಟ ದೇವಾಲಯ ನೌಕರ ಹೃದಯಾಘಾತದಿಂದ ಸಾವು

Share this with Friends

ಮೈಸೂರು,ಫೆ.21: ಚಾಮುಂಡಿಬೆಟ್ಟ ದೇವಸ್ಥಾನದ ನೌಕರ ಕರ್ತವ್ಯ ದಲ್ಲಿದ್ದಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮುಜರಾಯಿ ಇಲಾಖೆಯಿಂದ ನಿಯೋಜಿತರಾಗಿದ್ದ ಗೋಪಾಲ್ (46) ಮೃತ ನೌಕರ.100 ರೂ ಪ್ರವೇಶ ಧ್ವಾರದ ಕೌಂಟರ್ ಬಳಿ ಅವರು ಕಾರ್ಯನಿರ್ವಹಿಸುತ್ತಿದ್ದರು.

ಕೆಲಸ ಮಾಡುತ್ತಿದ್ದಾಗಲೇ ತೀವ್ರ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ, ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಗೋಪಾಲ್ ನಿಧನಕ್ಕೆ ದೇವಾಲಯದ ಸಿಬ್ಬಂದಿ‌ ಹಾಗೂ ಅರ್ಚಕರು,ಆಡಳಿತ ಮಂಡಳಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ.


Share this with Friends

Related Post