ಮೈಸೂರು: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಕರ್ನಾಟಕ ಸೇನಾ ಪಡೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಚಾಮುಂಡಿ ಬೆಟ್ಟದ ಆವ್ಯವಸ್ಥೆ ಹಾಗೂ ಚಾಮುಂಡಿಬೆಟ್ಟ ಪ್ರಾಧಿಕಾರ ವಿರೋದಿಸಿ ಮೈಸೂರಿನ ಹಳೆ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಲಾಯಿತು.
ಜತೆಗೆ ರಾಜ್ಯ ಸರ್ಕಾರ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ, ಸ್ಮಾರ್ಟ್ ಕಾರ್ಡ್ ಜಾರಿಗೊಳಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಪ್ರತಿಭಟನಾನಿರತರು ಘೋಷಣೆ ಕೂಗಿದರು.
ಮೈಸೂರು ಅರಸರ ಸಂಸ್ಥಾನದ ಆದಿದೇವತೆ, ನಾಡದೇವತೆ, ತಾಯಿ ಚಾಮುಂಡೇಶ್ವರಿ ದೇವಿ ಬೆಟ್ಟವನ್ನು ಶ್ರದ್ಧಾಭಕ್ತಿಯಿಂದ ಅಭಿವೃದ್ಧಿಪಡಿಸಿದ್ದು, ದೇವಿಯ ಮಹಾನ್ ಆರಾಧಕರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ಬೆಟ್ಟದಲ್ಲಿ, ದೇವಸ್ಥಾನಕ್ಕೆ ಪೂಜೆ ಮಾಡುವ ಅರ್ಚಕರಿಂದ ಹಿಡಿದು ಎಲಾ ವರ್ಗದವರಿಗೂ ಆಗಿನ ಕಾಲದಲ್ಲಿಯೇ ಅಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟದ್ದಾರೆ. ಜೊತೆಗೆ ಚಾಮುಂಡಿ ಬೆಟ್ಟ ಈಗ ಒಂದು ಗ್ರಾಮವಾಗಿದೆ, ಗ್ರಾಮ ಪಂಚಾಯಿತಿಯೂ ಇದೆ.
ಈಗ ಪ್ರಾಧಿಕಾರ ರಚನೆಯಾದರೆ ಸುಮಾರು 300 ಮೀಟರ್ ಸುತ್ತಳತೆ (ಅಂದರೆ 1000 ಅಡಿ ಸುತ್ತಮುತ್ತ) ಅಭಿವೃದ್ಧಿ ಮಾಡುತ್ತಾರೆ ಅಷ್ಟೆ, ಆಗ ಇಡೀ ಗ್ರಾಮವೇ ಇಲ್ಲದಂತಾಗುತ್ತದೆ ಎಂದು ಸೇನಾಪಡೆ ಮುಖಂಡರು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ಹೆಸರಿನಲ್ಲಿ 10,000 25000 ಹಾಗೂ ರೂ.1,00,000 ನಿಗದಿಪಡಿಸಲು ಉದ್ದೇಶಿಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ದೇವಾಲಯದಿಂದ ಬರುವ ಹಣವನ್ನೇ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹಾಗೂ ಸ್ಮಾರ್ಟ್ ಕಾರ್ಡ್ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು.
ಪ್ರಭುಶಂಕರ್ ಎಂ ಬಿ, ಪ್ರಜೀಶ್, ಕೃಷ್ಣಪ್ಪ, ಸುರೇಶ್ ಗೋಲ್ಡ್, ಶಿವಲಿಂಗಯ್ಯ, ನಾರಾಯಣ ಗೌಡ, ಕುಮಾರ್ ಗೌಡ, ಸಿಂದುವಳ್ಳಿ, ಶಿವಕುಮಾರ್, ವರಕೂಡು ಕೃಷ್ಣಗೌಡ, ಮಂಜುಳ, ವಿಜಯೇಂದ್ರ, ಭಾಗ್ಯಮ್ಮ, ರಘು ಅರಸ್, ಎಳನೀರು ರಾಮಣ್ಯ, ಪ್ರದೀಪ, ಗುರು ಮಲ್ಲಪ್ಪ, ಶಂಕರ್ ಗುರು, ಚಂದ್ರಶೇಖರ್, ಕೃಷ್ಣಮೂರ್ತಿ, ವಿಷ್ಣು ಮತ್ತಿತರರು ಭಾಗವಹಿಸಿದ್ದರು.