Fri. Jan 10th, 2025

ಚಂದನ್ ಶೆಟ್ಟಿ-ನಿವೇದಿತಾ ದಾಂಪತ್ಯ ಜೀವನದಲ್ಲಿ ಬಿರುಕು, ಡಿವೋರ್ಸ್‌ಗೆ ಅರ್ಜಿ

Share this with Friends

ಬೆಂಗಳೂರು,ಜೂ.7: ಇತ್ತೀಚೆಗೆ ಸೆಲಬ್ರೆಟಿಗಳ ಡಿವೋರ್ಸ್ ಪ್ರಕರಣ ಗಳು ಹೆಚ್ಚಾಗುತ್ತಿದ್ದು, ಈ ಸಾಲಿಗೆ ರ್‍ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಜೋಡಿ ಸೇರುತ್ತಿವೆ.

ಚಂದನ್ ಶೆಟ್ಟಿ ಹಾಗೂ ಕಿರುತೆರೆ ಸ್ಟಾರ್ ನಿವೇದಿತಾ ಗೌಡಾ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ.

ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಾರಾ ಜೋಡಿಯಾಗಿ ಮಿಂಚಿದ್ದ ನಿವೇದಿತಾ ಹಾಗೂ ಚಂದನ್ ವಿಚ್ಚೇದನ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ವುಂಟುಮಾಡಿದೆ.

ತಮ್ಮ ಕನ್ನಡ ರ್‍ಯಾಪ್ ಹಾಡುಗಳು ಮೂಲಕ ಮನೆ ಮಾತಾದ ಚಂದನ್ ಶೆಟ್ಟಿಗೆ ನಿವೇದಿತಾ ಜೊತೆಯಾಗಿದ್ದು ಬಿಗ್ ಬಾಸ್ -5ರಲ್ಲಿ.

ಬೊಂಬೆ ಬೊಂಬೆ ಅಂತ ಹಾಡುತ್ತಲ್ಲೇ ಎಲ್ಲರ ಮನ ಗೆದ್ದ ನಿವೇದಿತಾ ಎಲ್ಲರಿಗೂ ಅಚ್ಚುಮೆಚ್ಚಾದರು.

ಮೈಸೂರು ಯುವ ದಸರಾದಲ್ಲಿ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದು ದೊಡ್ಡ ವಿವಾದವಾಗಿತ್ತು.

ನಂತರ ಎಲ್ಲರೂ ಇವರ ಬೆಂಬಲಕ್ಕೆ ನಿಂತು ವಿಷಯವನ್ನು ತಣ್ಣಗಾಗಿಸಿದ್ದರು. ಅದಾದ ನಂತರ ಮೈಸೂರಲ್ಲಿ ಈ ಜೋಡಿ ಅದ್ಧೂರಿಯಾಗಿ ದಾಂಪತ್ಯಕ್ಕೆ ಕಾಲಿಟ್ಟಿತ್ತು.

ಕ್ಯಾಂಡಿ ಕ್ರಶ್ ಚಿತ್ರದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡಾ ಒಟ್ಟಿಗೆ ನಟಿಸಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡಾ ಡೈವೊರ್ಸ್ ವಿಷಯ ಅಭಿಮಾನಿಗಳಿಗೆ ಶಾಕ್ ನೀಡಿದೆ.


Share this with Friends

Related Post