Mon. Dec 23rd, 2024

ವೆಲ್ಲೆಸ್ಲಿ ಸೇತುವೆ ತಡೆಗೋಡೆ ಕುಸಿತ ಪರಿಶೀಲಿಸಿದ ಚಲುವರಾಯಸ್ವಾಮಿ

Share this with Friends

ಮಂಡ್ಯ,ಆ.3: ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕುಸಿತಗೊಂಡಿದ್ದ‌ ತಡೆಗೋಡೆ,
ಹಾನಿಗೊಳಗಾದ ಡಾಂಬಾರ್ ರಸ್ತೆ ಪ್ರದೇಶಗಳನ್ನು ಸಚಿವರು ವೀಕ್ಷಿಸಿದರು.

ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರು ಅಧಿಕಾರಿಗಳೊಂದಿಗೆ ಸ್ಥಳ ವೀಕ್ಷಣೆ ಮಾಡಿದರು.

ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ನದಿಗೆ ಕಟ್ಟಲಾಗಿದ್ದ ಭಾರಿ ತಡೆಗೋಡೆ ಸಹ ನೀರಿನ ರಭಸಕ್ಕೆ ಕುಸಿದು ಕೊಚ್ಚಿ ಹೋಗಿತ್ತು, ಇದರ ಜೊತೆ ಡಾಂಬಾರ್ ರಸ್ತೆ ಸಹಿತ ಮಣ್ಣು ಕೊಚ್ಚಿ ಹೋಗಿ ಹಳ್ಳ ಬಿದ್ದು ಅಪಾರ.ಹಾನಿಯಾಗಿದೆ.

ಸಂಪರ್ಕಕಡಿತ ಗೊಂಡಿದ್ದ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಮತ್ತು ಇತರ ಅಧಿಕಾರಿಗಳ ತಂಡ ಮೊದಲು ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದರು.

200 ವರ್ಷಗಳ ಇತಿಹಾಸವಿರುವ ಲಾರ್ಡ್ ವೆಲ್ಲೆಸ್ಲಿ ಸೇತುವೆ ಮೇಲೆ ನಡೆದಾಡಿದ ಸಚಿವ ಚಲುವರಾಯ ಸ್ವಾಮಿ ಹೆಚ್ಚು ಹಾನಿಯಾಗದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ನದಿ ಪಕ್ಕದಲ್ಲೇ ಇದ್ದ ಉದ್ಯಾನವನ ಸಹ ಕೊಚ್ಚಿ ಹೋಗಿ ಕಬ್ಬಿಣದ ತಂತಿ, ಬೇಲೆ ಸಹಿತ ಹಾನಿಗೊಳಗಾಗಿರುವುದನ್ನು ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಇಲಾಖೆಯೊಂದಿಗೆ ಸ್ಥಳದಲ್ಲೇ ಚರ್ಚೆ ನಡೆಸಿ, ಪ್ರವಾಹ ನಿಂತ ಮೇಲೆ ಹಾನಿಯಾಗಿರುವ ಸಂಪರ್ಕ ರಸ್ತೆ, ತಡೆಗೋಡೆ ಸೇರಿದಂತೆ ಉದ್ಯಾನವನ್ನು ಸರಿ ಪಡಿಸಿ, ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ತಹಶೀಲ್ದಾರ್ ಪರಿಶುರಾಮ್ ಸತ್ತಿಗೇರಿ, ತಾ.ಪಂ ಇಒ ವೇಣು, ಲೋಕೋಪಯೋಗಿ ಇಲಾಖೆ, ಸೆಸ್ಕ್ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.


Share this with Friends

Related Post