ಮೈಸೂರು, ಜುಲೈ.1: ಮಕ್ಕಳು ಪ್ರತಿದಿನ ಪತ್ರಿಕೆಗಳನ್ನು ಓದುವ ಮೂಲಕ ನಾಡು, ಜಿಲ್ಲೆ,ರಾಷ್ಟ್ರದ ಸುದ್ದಿ ಸಮಾಚಾರಗಳನ್ನು ತಿಳಿದುಕೊಳ್ಳಬೇಕೆಂದು ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್. ಪ್ರಕಾಶ್ ಪ್ರಿಯಾದರ್ಶನ್ ಸಲಹೆ ನೀಡಿದರು.
ಮೈಸೂರಿನ ಎಂ ಜಿ ರಸ್ತೆಯಲ್ಲಿರುವ ಸಿ. ಎಸ್. ಐ ಬಾಯ್ಸ್ ಬೋರ್ಡಿಂಗ್ ಹೋಮ್ ನ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ
ಪುಸ್ತಕ,ಲೇಖನಿ ಸಾಮಗ್ರಿ ಹಣ್ಣು ವಿತರಿಸಿ ಅವರು ಮಾತನಾಡಿದರು.
ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ.ಕ್ರೀಡೆ, ಸಂಗೀತ, ಇನ್ನು ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಉತ್ತಮವಾಗಿ ಓದಿ ಸಮಾಜಕ್ಕೆ ಗಣ್ಯ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ಸಮಾಜವನ್ನ ರಕ್ಷಿಸುವ ಹಾಗೂ ಸಾರ್ವಜನಿಕರನ್ನ ಜಾಗೃತರನ್ನಾಗಿಸುವ ಕೆಲಸಗಳನ್ನು ಪತ್ರಿಕಾ ಮಾಧ್ಯಮ ಮಾಡುತ್ತಿದೆ, ಕಾರ್ಯಾಂಗ ಶಾಸಕಾಂಗ ನ್ಯಾಯಂಗದಷ್ಟೇ ಪತ್ರಿಕಾರಂಗವು ಬಹುಮುಖ್ಯ ಎಂದು ಪ್ರಕಾಶ್ ಹೇಳಿದರು.
ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ ಜೆ.ಎಸ್ ಮಾತನಾಡಿ, ಪತ್ರಿಕೆಗಳು ಜಾರಿಗೆ ಬಂದ ದಿನ,ಪತ್ರಿಕೆಗಳು ಹುಟ್ಟಿದ ದಿನತಿಳಿದುಕೊಳ್ಳಬೇಕು.
ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸುಬ್ರಮಣಿ, ಛಾಯಾ,ಯಶವಂತ್ ಕುಮಾರ್, ಮಹದೇವ್,ಮಹೇಶ್, ಚಂದ್ರಶೇಖರ್, ಎಸ್.ಪಿ. ಅಕ್ಷಯ ಪ್ರಿಯಾದರ್ಶನ್,ಸ್ವಾಮಿ,ಶ್ರೀಧರ್ ಮತ್ತಿತರರು ಹಾಜರಿದ್ದರು.