Tue. Dec 24th, 2024

ಯೋಗ್ಯ ಪ್ರತಿನಿಧಿಯನ್ನು ಆಯ್ಕೆ ಮಾಡಿ: ವಿಕ್ರಮ ಅಯ್ಯಂಗಾರ್ ಸಲಹೆ

Share this with Friends

ಮೈಸೂರು, ಏ.23: ಮತದಾನ ಪವಿತ್ರ ಕರ್ತವ್ಯ ಹಾಗೂ ಪ್ರತಿಯೊಬ್ಬ ಮತದಾರನ ಹಕ್ಕು, ಯೋಗ್ಯ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್ ಸಲಹೆ‌ ನೀಡಿದ್ದಾರೆ.

ಹಣ ಹಾಗೂ ವಸ್ತುಗಳ ಆಮಿಷ ಒಡ್ಡುವ ರಾಜಕೀಯ ವ್ಯಕ್ತಿಗಳನ್ನು ದೂರವಿಡಬೇಕು, ಆಯ್ಕೆ ಆಗುವ ಜನಪ್ರತಿನಿಧಿ ಮತದಾರರನ್ನು ಪ್ರತಿನಿಧಿಸುತ್ತಾನೆ ಎಂಬುವುದನ್ನು ಮರೆಯಬಾರದು ಎಂದು ಅವರು ಹೇಳಿದ್ದಾರೆ.

ಯೋಗ್ಯ ಪ್ರತಿನಿಧಿ ಆಯ್ಕೆ ಮಾಡುವ ಮೂಲಕ ಮತದಾನದ ಪಾವಿತ್ರ್ಯವನ್ನು ಮತ್ತು ಪ್ರಜ್ಞಾವಂತಿಕೆಯನ್ನು ಮೆರೆಯಬೇಕು, ನೆರೆಹೊರೆಯವರಿಗೂ ಮತದಾನದ ಬಗ್ಗೆ ಅರಿವು ಮೂಡಿಸಿ ಪ್ರಜಾಪ್ರಭುತ್ವದ ಮಹತ್ವವನ್ನು ಎಲ್ಲರೂ ಸಾರಬೇಕು ಎಂದು
ವಿಕ್ರಂ ಅಯ್ಯಂಗಾರ್ ಕೋರಿದ್ದಾರೆ.


Share this with Friends

Related Post