Fri. Nov 1st, 2024

ಚುಟುಕು ಬ್ರಹ್ಮ ದಿನಕರ ದೇಸಾಯಿ ಸ್ಮರಣಾರ್ಥ ಮೊದಲ ಬಾರಿಗೆ ಚುಟುಕು ಚಿತ್ತಾರ ಕವಿಗೋಷ್ಠಿ ಅಯೋಜನೆ : ಅನಿತಾ

Share this with Friends

ಬೆಂಗಳೂರು : ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಸ್ಮರಣಾರ್ಥವಾಗಿ ಚುಟುಕು ಚಿತ್ತಾರ ಕವಿಗೋಷ್ಠಿ, ಟ್ರಸ್ಟ್ ಉದ್ಘಾಟನೆ, ಪ್ರಕಾಶನ ಸಂಸ್ಥೆ ಲಾಂಛನ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ರಾಜರಾಜೇಶ್ವರಿ ಇಂಗ್ಲಿಷ್ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಶ್ರೀ ಬಸವರಾಜ ಸ್ವಾಮಿಗಳು ಹಾಗೂ ಶ್ರೀ ಸಂಜಯಾನಂದ ಸ್ವಾಮಿಗಳು ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಂದಗೆರೆ ಕಲೆ-ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷರಾದ ಮಂದಗೆರೆ ರಾಮ್ ಕುಮಾರ್ ಮಾತನಾಡಿ ಸಂಸ್ಥೆ ನಡೆದು ಬಂದ ನುಡಿಗಳನಾಡಿ ದಾಖಲೆಯ ಕನ್ನಡ ಕಾಯಕದ ಬಗ್ಗೆ ವಿಸ್ತಾರವಾದ ವಿವರಣೆ ನೀಡಿದರು.

ರಾಜ್ಯದಲ್ಲಿ ಪ್ರಥಮ ಭಾರಿಗೆ ತುಂಬಾ ವಿಭಿನ್ನವಾಗಿ ಚುಟುಕು ಚಿತ್ತಾರ ಕವಿಗೋಷ್ಠಿಯನ್ನು ಆಯೋಜಿಸಿದ್ದ ಸಾಂಸ್ಥಾಪಕ ಟ್ರಸ್ಟಿ ಹಾಗೂ ಕಾರ್ಯದರ್ಶಿ ಅನಿತಾರವರು ಮಾತನಾಡಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಚುಟುಕು ಕವಿಗೋಷ್ಠಿಯನ್ನು ಆಯೋಜಿಸಿದ್ದೇವೆ ಇಲ್ಲಿ ಸುಮಾರು 20ಕ್ಕೂ ಹೆಚ್ಚು ಕವಿಗಳನ್ನು 6 ತಂಡಗಳಾಗಿ ರಚಿಸಿ ಚುಟುಕು ಕವನ ವಾಚನ ಮಾಡಿಸಿ ಅತ್ಯುತ್ತಮವಾಗಿ ಚುಟುಕು ವಾಚನ ಮಾಡಿದ ತಂಡಕ್ಕೆ ಪ್ರಶಸ್ತಿ ಮತ್ತು ಬಹುಮಾನ ನೀಡಲಾಗುತ್ತಿದೆ ಎಂದರು.

ಹಾಗೆಯೇ ಪುಷ್ಕರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಪ್ರಕಾಶನ ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಮಾತನಾಡಿ, ವಿಶಿಷ್ಟವಾದ ಚುಟುಕು ಕವಿಗೋಷ್ಠಿಯ ಆಯೋಜನೆಯ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದರು.

ಚುಟುಕು ಕವಿಗೋಷ್ಠಿಯ ಅಧ್ಯಕ್ಷರಾದ ಚಲನಚಿತ್ರ ನಿರ್ದೇಶಕರು ಹಾಗೂ ಸಾಹಿತಿಗಳಾದ ಮಂಜು ಪಾಂಡವಪುರ ಮಾತನಾಡಿ ಎಲ್ಲಾ ತಂಡದವರು ಉತ್ತಮವಾಗಿ ಚುಟುಕು ಕಾವ್ಯ ವಾಚನ ಮಾಡಿದ್ದಾರೆ, ಕೆಲವರು ಇನ್ನೂ ಅರ್ಥ ಪೂರ್ಣವಾದ ಪದಗುಂಚಗಳಲ್ಲಿ ಚುಟುಕುಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಬೇಕು ಎಂದರು ಹಾಗೆಯೇ ಇಲ್ಲಿ ಗೆದ್ದವರು ಸೋತವರು ಎನ್ನುವ ಪ್ರಶ್ನೆ ಇಲ್ಲ ಎಲ್ಲಾರೂ ಗೆದ್ದವರೇ ಮುಂದಿನ ದಿನಗಳಲ್ಲಿ ಎಲ್ಲಾರು ಸೇರಿ ದೊಡ್ಡ ಮಟ್ಟದಲ್ಲಿ ಚುಟುಕು ಕವಿಗೋಷ್ಠಿಯನ್ನು ಆಯೋಜಿಸೋಣ ಎಂದು ತಿಳಿಸಿ ಎಲ್ಲಾರಿಗೂ ಶುಭ ಕೋರಿದರು.

ಚಲನಚಿತ್ರ ನಿರ್ಮಾಪಕರು ಹಾಗೂ ಪತ್ರಿಕಾ ಸಂಪಾದಕರಾದ ಪರಮ್ ಗುಬ್ಬಿ ಮಾತನಾಡಿ ರಾಜ್ಯವು ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದೆ ಅದನ್ನು ಮತ್ತೊಂದಷ್ಟು ಶ್ರೀಮಂತಗೊಳಿಸಿವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ಲತಾ ಬಾರ್ಗವ್ ನೆರವೇರಿಸಿದರು ಕಾರ್ಯಕ್ರಮದಲ್ಲಿ ಕಲಾವಿದಾ ಆಕಾಶ್ ಕಲ್ಲಪ್ಪ ಭಜಂತ್ರಿ, ಕೃಷ್ಣಪ್ಪ, ಪ್ರಸನ್ನ ಕುಮಾರ್, ಮಧುರಾ ಗಾಂವ್ಕರ್,ಚಂದನ್ ಕೃಷ್ಣ, ಸುಮಲತಾ, ದಿವ್ಯಜಿ ಬಾಲಾಜಿ,ಶಾಂತಿ ರೇಖಾ ಭಟ್ , ನಳಿನಾ ದ್ವಾರಕಾನಾಥ್, ಪೂರ್ಣಿಮ ರಾಜೇಶ್, ನಾರಾಯಣ ಸ್ವಾಮಿ , ಶರಣಪ್ಪ , ಮಹೇಶ್ ಬೆಂಗಳೂರು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು .


Share this with Friends

Related Post