Fri. Nov 1st, 2024

ಪೌರಕಾರ್ಮಿಕರು ದೇಶದ ಬೆನ್ನೆಲುಬು: ಮಾ ವಿ ರಾಮ್ ಪ್ರಸಾದ್

Share this with Friends

ಮೈಸೂರು: ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರು ದೇಶದ ಬೆನ್ನೆಲುಬು, ಅವರನ್ನು ಎಲ್ಲರೂ ಗೌರವಿಸಬೇಕು ಎಂದು ನಗರ ಪಾಲಿಕೆ ಮಾಜಿ ಸದಸ್ಯ ಮ. ವಿ ರಾಮಪ್ರಸಾದ್ ಹೇಳಿದರು,

ನಗರದ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಜನಮನ ವೇದಿಕೆ ಅನ್ನಪೂರ್ಣ ಐ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದಲ್ಲಿ ವಾಹನಗಳು ಮನೆ ಮುಂದೆ ಬರುವಾಗ ಸಾರ್ವಜನಿಕರು ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಕೊಡುವ ಮೂಲಕ ಪೌರಕಾರ್ಮಿಕರೊಂದಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಪೌರಕಾರ್ಮಿಕರು ಯಾವುದೇ ಕಾರಣಕ್ಕೂ ಶೌಚ ಗುಂಡಿಗಳಿಗೆ ಇಳಿಯಬಾರದು, ಯಂತ್ರಗಳ ಮೂಲಕ ಸ್ವಚ್ಛಗೊಳಿಸಬೇಕು ಎಂದು ತಿಳಿಹೇಳಿದರು.

ಪೌರಕಾರ್ಮಿಕರು ದೇವರ ಸಮಾನ ಅವರು ಇಲ್ಲವೆಂದರೆ ನಗರಗಳಲ್ಲಿ ಸ್ವಚ್ಛತೆಯಿರುವುದಿಲ್ಲ, ಪ್ರತಿಯೊಬ್ಬರೂ ನಗರದ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಮ.ವಿ.ರಾಮಪ್ರಸಾದ್ ತಿಳಿಸಿದರು.

ಬದುಕಿಗೆ ಕಣ್ಣುಗಳು ಅವಶ್ಯಕವಾಗಿದ್ದು, ಅವುಗಳನ್ನು ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು,ಇಂತಹ ಕಾರ್ಯ ಹಮ್ಮಿಕೊಂಡ ಜನಮನ ವೇದಿಕೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು

ಅನ್ನಪೂರ್ಣ ಐ ಆಸ್ಪತ್ರೆಯ ಎಂ ಡಿ
ಅಶ್ವತ್ ಕುಮಾರ್, ಅಪೂರ್ವ ಸುರೇಶ್,
ಸ್ಥಳೀಯ ಕಾರ್ಯಕರ್ತರಾದ ಮಂಜುನಾಥ್, ಸೋಮೇಶ್, ಮೋಹನ್, ರವಿ, ರಮೇಶ್, ಮಧು, ಆದರ್ಶ್,ಶ್ರೀ ದುರ್ಗಾ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ರೇಣುಕಾ ಹೊರಕೇರಿ ಮತ್ತಿತರರು ಹಾಜರಿದ್ದು.


Share this with Friends

Related Post