Sat. Apr 19th, 2025

ಉರುಳಿ ಬಿದ್ದ ಮರಗಳ ತೆರವು ಕಾರ್ಯ

Share this with Friends

ಮೈಸೂರು, ಮೇ.4: ಸಾಂಸ್ಕೃತಿಕ ನಗರಿಯಲ್ಲಿ ನೆನ್ನೆ ಸಂಜೆ ಸುರಿದ ಭಾರೀ ಬಿರುಗಾಳಿ ಮಳೆಗೆ ನೂರಾರು ಮರಗಳು ಉರುಳಿ ಬಿದ್ದಿದ್ದನ್ನು ತೆರವುಗೊಳಿಸಲಾಯಿತು.

ಇಂದು ಮುಂಜಾನೆಯಿಂದಲೇ ಮೈಸೂರು ನಗರ ಪಾಲಿಕೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ವಾಹನಗಳನ್ನು ತಂದು ಮರಗಳನ್ನು ವಿಂಗಡಣೆ ಮಾಡಿ ಸಾಗಿಸುವ ಕಾರ್ಯದಲ್ಲಿ ನಿರತರಾದರು.

ಮೈಸೂರಿನ ಎಲ್ಲ ಪ್ರದೇಶಗಳಲ್ಲೂ ಭಾರಿ ಮರಗಳು ಕೂಂಬೆ,ರೆಂಬೆಗಳು ಉರುಳಿಬಿದ್ದು ವಾಹನ ಸಂಚಾರಕ್ಕೆ ಬಹಳ ಅಡಚಣೆಯಾಗಿತ್ತು.

ವಾಹನಗಳನ್ನು ಬೇರೆ ಬೇರೆ ರಸ್ತೆಗಳಲ್ಲಿ ಸಾಗಲು ಸಂಚಾರಿ ಪೊಲೀಸರು ಅನುವು ಮಾಡಿಕೊಟ್ಟರು, ಮರಗಳ ತುಂಡುಗಳನ್ನು ಪ್ರತ್ಯೇಕ ಮಾಡಿ ಸಾಗಿಸಲು ಸಂಜೆವರೆಗೂ ಪಾಲಿಕೆ ಪೌರ ಕಾರ್ಮಿಕರು ಹರಸಾಹಸ ಪಟ್ಟರು.


Share this with Friends

Related Post