Fri. Mar 6th, 2026

ಸಿಎಂ,ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್: ಗೊಂದಲಕ್ಕೆ ಬೀಳುತ್ತಾ ತೆರೆ

Share this with Friends

ಬೆಂಗಳೂರು:ನನ್ನ ಹಾಗು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಹೈಕಮಾಂಡ್ ಹೇಳಿದಂತೆ ಇಬ್ಬರೂ ಕೇಳಿಕೊಂಡು ಬಂದಿದ್ದು, ಮುಂದೆಯೂ ಹೈಕಮಾಂಡ್ ನಿರ್ದೇಶನ ಪಾಲಿಸುತ್ತೇವೆ,ಗೊಂದಲ ಕೇವಲ ಮಾಧ್ಯಮಗಳ ಸೃಷ್ಟಿಯಾಗಿದ್ದು,ನಾಳೆಯಿಂದ ಈ ಗೊಂದಲ ಇರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಹೈಕಮಾಂಡ್ ನಿರ್ದೇಶನದಂತೆ ಅಧಿಕೃತ ನಿವಾಸ ಕಾವೇರಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಡಿಂಗ್ ನಡೆಸಿದರು. ನಂತರ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಿಎಂ,ಕಳೆದ ಒಂದು ತಿಂಗಳಿನಿಂದ ಅನಗತ್ಯವಾಗಿ ಕೆಲ ಗೊಂದಲ ನಿರ್ಮಾಣವಾಗಿವೆ ಹಾಗಾಗಿ ಹೈಕಾಂಡ್ ನಿರ್ದೇಶನದಂತೆ ನಾವಿಬ್ಬರೇ ಕುಳಿತು ಮಾತನಾಡಿದೆವು, 2028 ರ ಚುನಾವಣೆ ,ಸ್ಥಳೀಯ ಸಂಸ್ಥೆ ಚುನಾವಣೆ ನಮಗೆ ಬಹಳ ಮುಖ್ಯ, ಅದರ ಬಗ್ಗೆ ಚರ್ಚೆ ಮಾಡಿದೆವು, ಮತ್ತೆ ಕಾಂಗ್ರೆಸ್ ಪಕ್ಷವನ್ನ ಅಧಿಕಾರಕ್ಕೆ ತರಬೇಕು ಎನ್ನುವ ಚರ್ಚೆ ಮಾಡಿದೆವು, ನಾವು ಇಬ್ಬರೂ 2023 ರ ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿದ ರೀತಿ ಮುಂದೆಯೂ ಒಟ್ಟಿಗೆ ಹೋಗುತ್ತೇವೆ,ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಇಬ್ಬರಲ್ಲಿಯೂ ಇವತ್ತಿನವರೆಗೂ ಭಿನ್ನಾಭಿಪ್ರಾಯ ಇಲ್ಲ, ಮುಂದೆಯೂ ಇರಲ್ಲ,ನಾವು ಒಟ್ಟಿಗೆ ಹೋಗುತ್ತೇವೆ ಎಂದರು.

ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ, ವಿರೋಧ ಪಕ್ಷವನ್ನು ಹಿಂದೆಯೂ ಎದುರಿಸಿದ್ದೇವೆ ಮುಂದೆಯೂ ಎದುರಿಸಲಿದ್ದೇವೆ, ಸುಳ್ಳು ಅಪಪ್ರಚಾರ, ಸುಳ್ಳು ಆರೋಪ,ಅಪವಾದಗಳನ್ನು ಮಾಡುವುದು ಬಿಜೆಪಿ ಜೆಡಿಎಸ್ ಅವರ ಚಾಳಿ, ಇವರಿಬ್ಬರನ್ನೂ ಬಹಳ ಸಮರ್ಥವಾಗಿ ಸರ್ಕಾರ ಎದುರಿಸಲಿದೆ, ನಾನು, ಡಿಸಿಎಂ ಇಬ್ಬರೂ ಸಮರ್ಥವಾಗಿ ಎದುರಿಸಲಿದ್ದೇವೆ ಅದಕ್ಕೆ ಬೇಕಾದ ತಂತ್ರಗಾರಿಕೆ ಮಾಡಿದ್ದೇವೆ ಎಂದರು.

ನಾವಿಬ್ಬರೂ ಸೇರಿಯೇ ಎಲ್ಲ ತಂತ್ರಗಾರಿಕೆ ಮಾಡುತ್ತೇವೆ,ವಿಪಕ್ಷಗಳು ಅವಿಶ್ವಾಸ ನಿರ್ಣಯದ ಹೇಳಿಕೆ ನೀಡಿದ್ದಾರೆ ಅದು ಅಸಾಧ್ಯ, ನಾವು 140 ಸದಸ್ಯರಿದ್ದರು ಅವರು 64+18 ಮಾತ್ರ ಅವರಿಬ್ಬರೂ ಸೇರಿ 82 ಅದಕ್ಕಿಂತ ಜಾಸ್ತಿ ಸಾಧ್ಯವೇ ಇಲ್ಲ, ಅವರು ಏನೇ ಮಾಡಿದರೂ ಸದನದಲ್ಲಿ ಏನೇ ಆರೋಪ ಮಾಡಿದರೂ ಅವೆಲ್ಲವನ್ನೂ ಸಮರ್ಥವಾಗಿ ಎದುರಿಸಲಿದ್ದೇವೆ ಎಂದರು.

ನಾವಿಬ್ಬರೂ ಹೈಕಮಾಂಡ್ ಹೇಳಿದ್ದನ್ನು ಕೇಳುತ್ತೇವೆ, ಸದನ ಇರುವುದರಿಂದ ನಮಗೆ ಇಬ್ಬರಿಗೂ ಈ ಗೊಂಲ ತಿಳು ಮಾಡಿ ಎಂದಿದ್ದಾರೆ.  ನಾಳೆಯಿಂದ ಯಾವುದೇ ಗೊಂದಲ ಇರಲ್ಲ, ನಮ್ಮಲ್ಲಿ ಗೊಂದಲ ಇಲ್ಲ ಆದರೆ ಸೃಷ್ಟಿಯಾಗಿದೆ, ಕೆಲವು ಮಾಧ್ಯಮಗಳು ಮಾಡಿವೆ,ಕೆಲ ವರದಿಗಾರರು ಮಾಡಿದ ಗೊಂದಲ ಇದು, ಶಾಸಕರು ಹೈಕಮಾಂಡ್ ಬಳಿ ಹೋದರೆ ನಾಯಕತ್ವ ವಿರುದ್ಧ ಅಂತ ಅಲ್ಲ, ಅವಕಾಶಕ್ಕಾಗಿ ಹೋಗಿರುತ್ತಾರೆ ಎಂದರು.


Share this with Friends

Related Post