ಮೈಸೂರು, ಮಾ.2: ಮೈಸೂರಿನ ಜಲಪುರಿಯಲ್ಲಿ ನಿರ್ಮಾಣವಾಗಿರುವ ಪೊಲೀಸ್ ಆರೋಗ್ಯ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉಧ್ಘಾಟಿಸಿದರು.
ನಿಮಗಾಗಿಯೇ ಇರುವ ಈ ಆರೋಗ್ಯ ಕೇಂದ್ರದ ಸೇವೆಯನ್ನು ಅಗತ್ಯವಿದ್ದಾಗ ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸಲಹೆ ನೀಡಿದರು.
ಪೊಲೀಸ್ ಆರೋಗ್ಯ ಕೇಂದ್ರ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದು,6 ಹಾಸಿಗೆಗಳಿರಲಿವೆ, ಈ ಕೇಂದ್ರ ಹಿಂದೆ ಹಳೇ ಪೊಲೀಸ್ ವಸತಿಗೃಹದಲ್ಲಿ ಕಾರ್ಯನಿರ್ವಹಿಸುತಿತ್ತು.
ಪೊಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಈ ಕೇಂದ್ರದಲ್ಲಿ ಬೆಳಗಿನಿಂದ ಸಂಜೆವರಗೆ ಸೇವೆ ಲಭ್ಯವಿರಲಿದ್ದು, ಇಬ್ಬರು ಮೆಡಿಕಲ್ ಆಫೀಸರ್,ಫಾರ್ಮಾಸಿಸ್ಟ್, ಮೈನರ್ ಆಪರೇಷನ್ ಥಿಯೇಟರ್,ಕಿರಿಯ ಆರೋಗ್ಯ ಸಹಾಯಕರು ಇರುತ್ತಾರೆ, ಲ್ಯಾಬೊರೇಟರಿ, ಪಿಸಿಯೋಥೆರಪಿ ಸೇವೆ ಕೂಡಾ ಸಿಗಲಿದೆ.
ಪೊಲೀಸ್ ಸಿಬ್ಬಂದಿಗಳಿಗೆ ವಾರ್ಷಿಕ ತಪಾಸಣೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುತಿತ್ತು, ಇನ್ನು ಮುಂದೆ ಪೊಲೀಸ್ ಆರೋಗ್ಯ ಕೇಂದ್ರದಲ್ಲೇ ಮಾಡಲಾಗುವುದು.
ಪೊಲೀಸ್ ಸಿಬ್ಬಂದಿಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದರಿಂದ ಅವರಿಗೆ ಡಯಟ್ ಕೌನ್ಸಿಲಿಂಗ್ ಸೇರಿದಂತೆ ವಿವಿಧ ಕೌನ್ಸಿಲಿಂಗ್ ಸೇವೆಗಳನ್ನು ಇಲಾಖೆಯಲ್ಲಿರುವ ಸೈಕಾಲಜಿ ಸ್ಟನ್ ಅವರಿಂದ ಕೊಡಿಸಲಾಗುವುದೆಂದು ಆರೋಗ್ಯ ಕೇಂದ್ರದ ಮುಖ್ಯಸ್ಥ ಡಾ.ವೆಂಕಟೇಶ್ ಈ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹಾದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಮಂಜೇಗೌಡ, ಪ್ರಾದೇಶಿಕ ಆಯುಕ್ತರಾದ ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಹಾಜರಿದ್ದರು.