Mon. Dec 23rd, 2024

ದೂರದರ್ಶನದಲ್ಲಿ ‘ದಿ ಕೇರಳ ಸ್ಟೋರಿ’ ಚಿತ್ರ ಪ್ರಸಾರಕ್ಕೆ ಕೇರಳ ಸಿಎಂ ಪಿಣರಾಯಿ ತಡೆ

the kerala story
Share this with Friends

ತಿರುವನಂತಪುರ, ಎ.05: ‘ಜನರ ಮನಸ್ಸಿನಲ್ಲಿ ದ್ವೇಷ ತುಂಬುವ ಇಂತಹ ಚಲನಚಿತ್ರಗಳ ಪ್ರದರ್ಶನ ಖಂಡನೀಯ, ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ದೂರದರ್ಶನದಲ್ಲಿ ಪ್ರಸಾರ ಮಾಡದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸೂಚಿಸಿದ್ದಾರೆ.

‘ಲೋಕಸಭೆ ಚುನಾವಣೆ ಸನ್ನಿಹಿತವಾಗಿರುವ ಕಾರಣ ಈ ಸಿನಿಮಾ ಪ್ರಸಾರದಿಂದ ಜನರಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಳ್ಳಬಹುದು, ಅಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಪ್ರಚಾರ ಯಂತ್ರ ಆಗಬೇಡಿ, ಈ ಸಿನಿಮಾ ಪ್ರಸಾರ ಮಾಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳಿ’ ಎಂದು ಡಿಡಿ ನ್ಯಾಷನಲ್‌ ಬಳಿ ಕೇಳಿದ್ದಾರೆ.

‘ಜನರ ಮನಸ್ಸಿನಲ್ಲಿ ದ್ವೇಷ ತುಂಬುವ ಇಂತಹ ಚಲನಚಿತ್ರಗಳ ಪ್ರದರ್ಶನ ಖಂಡನೀಯ, ‘ದಿ ಕೇರಳ ಸ್ಟೋರಿ’ ಸಿನಿಮಾ ಪ್ರಸಾರದ ನಿರ್ಧಾರದಿಂದ ಹಿಂದೆ ಸರಿಯಿರಿ. ದ್ವೇಷ ಬಿತ್ತುವ ಇಂತಹ ದುರುದ್ದೇಶಪೂರಿತ ಪ್ರಯತ್ನಗಳನ್ನು ವಿರೋಧಿಸುವಲ್ಲಿ ಕೇರಳ ದೃಢವಾಗಿ ನಿಲ್ಲುತ್ತದೆ’ ಎಂದು ಸಿಎಂ ಪಿಣರಾಯಿ ವಿಜಯನ್‌ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ದೇಶದಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂನ ‘ದಿ ಕೇರಳ ಸ್ಟೋರಿ’ ಏಪ್ರಿಲ್‌ 5 ರಂದು ಪ್ರಸಾರ ಮಾಡುವುದಾಗಿ ದೂರದರ್ಶನ ಘೋಷಣೆ ಮಾಡಿತ್ತು.


Share this with Friends

Related Post