Tue. Dec 24th, 2024

ಚುನಾವಣೆಯ ಫಲಿತಾಂಶದ‌ ಪರಿಣಾಮವನ್ನಸಿಎಂ,ಡಿಸಿಎಂ ಎದುರಿಸಲಿದ್ದಾರೆ:ಬಿವೈವಿ

Share this with Friends

ಶಿವಮೊಗ್ಗ,ಮೇ.7: ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದ್ದು,ಇದರ ಪರಿಣಾಮವನ್ನು ಸಿಎಂ ಮತ್ತು ಡಿಸಿಎಂ ಎದರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಮತ ಚಲಾಯಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು
ಖಾತರಿಗಳಿಂದ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ ಎಂದು ವ್ಯಂಗ್ಯವಾಡಿದರು.

ಜೂನ್ 4 ರಂದು ಮತ ಎಣಿಕೆ ಆರಂಭವಾಗುವ ವೇಳೆಗೆ ಅವರಿಗೆ ಶಾಕ್ ಆಗಲಿದೆ. ಕಾಂಗ್ರೆಸ್ ಸರ್ಕಾರದ ತಾತ್ಕಾಲಿಕ ಭರವಸೆಗಳಿಗಿಂತಲೂ ಬಿಜೆಪಿ ಮತ್ತು ಪ್ರಧಾನಿ ಮೋದಿಯವರ ಖಾಯಂ ಭರವಸೆಗಳನ್ನು ಜನರು ನಂಬಿದ್ದಾರೆ,ಇದು ಫಲಿತಾಂಶದಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.

ಸಾರ್ವತ್ರಿಕ ಚುನಾವಣೆಯಲ್ಲಿ ನಾವು 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದೆವು, ಜೆಡಿಎಸ್ ಜೊತೆ ಸೇರಿ ಈ ಬಾರಿಯೂ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತೀಚೆಗೆ ಪ್ರಧಾನಿ ಮೋದಿ ಅವರು ಕರ್ನಾಟಕದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ ಎಲ್ಲೆಡೆ ಬಿಜೆಪಿಗೆ ಬೆಂಬಲವಿದೆ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಫಲಿತಾಂಶ ಬರಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಚ್ಚರಿಯ ಫಲಿತಾಂಶಗಳನ್ನು ನೋಡಲಿದೆ ಎಂದು ವಿಜಯೇಂದ್ರ ಹೇಳಿದರು.


Share this with Friends

Related Post