Thu. Dec 26th, 2024

ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಮಾನದ ವಿರುದ್ಧ ಸಹಿ ಸಂಗ್ರಹ

Share this with Friends

ಮೈಸೂರು, ಏ.6: ಕಾವೇರಿ ನೀರು ನಿರ್ವಹಣಾ ಮಂಡಳಿಯ ತೀರ್ಮಾನದ ವಿರುದ್ಧ ಚಳವಳಿ ಜೀವಂತವಾಗಿಡಲು ವಾರಕ್ಕೊಂದು ದಿನ ಕಾವೇರಿ ಕ್ರಿಯಾಸಮಿತಿ ಧರಣಿ ಸತ್ಯಾಗ್ರಹ‌ ಮುಂದುವರಿಸಿದೆ.

ವಾರಕ್ಕೆ ಒಂದು ದಿನ ಕಾವೇರಿ ಕ್ರಿಯಾ ಸಮಿತಿಯ ಧರಣಿ ಸತ್ಯಾಗ್ರಹ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮವನ್ನು ಎಂದಿನಂತೆ ಟೌನ್ ಹಾಲ್ ಮುಂಬಾಗ ಇಂದೂ ಕೂಡಾ ನಡೆಸಿತು.

ಇಂದು ಸಾವಿರಾರು ಮಂದಿಗೆ ಕಾವೇರಿ ನೀರಿನ ವಿಚಾರದಲ್ಲಿ ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಿಳಿಹೇಳಿ ಸಹಿ ಸಂಗ್ರಹಿಸಲಾಯಿತು.

ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷ ಎಸ್. ಜಯ ಪ್ರಕಾಶ್ ಮಾತನಾಡಿ ತಮಿಳುನಾಡು ಸರ್ಕಾರ ಅಲ್ಲಿನ ಜಲಾಶಯಗಳಲ್ಲಿ ಬೇಕಾದಷ್ಟು ನೀರಿದ್ದರೂ ಮತ್ತೆ ಏಪ್ರಿಲ್ ತಿಂಗಳಲ್ಲಿ 10 ಟಿ ಎಂ ಸಿ ನೀರು ಬಿಡಲು ಕಾವೇರಿ ನ್ಯಾಯ ಮಂಡಳಿಗೆ ಪಟ್ಟು ಹಿಡಿದಿರುವುದು ಅತ್ಯಂತ ನೋವಿನ ಸಂಗತಿ ಎಂದು ‌ತಿಳಿಸಿದರು.

ನಾವು ಭಾರತ ದೇಶದ ಒಕ್ಕೂಟದ ವ್ಯವಸ್ಥೆಯಲ್ಲಿದ್ದು, ನೆರೆ ಹೊರೆಯ ರಾಜ್ಯಗಳು ಅಣ್ಣ-ತಮ್ಮಂದಿರಂತಿರಬೇಕು. ತಮಿಳುನಾಡಿನವರು ನಮ್ಮ ನಾಡಿನಲ್ಲಿ ಕುಡಿಯಲು ನೀರಿಲ್ಲದಿದ್ದರೂ ನೀರು ಬಿಡಿ ಎಂದು ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.

ಕೂಡಲೇ ರಾಷ್ಟ್ರಪತಿಗಳು ಮಧ್ಯಸ್ಥಿಕೆ ವಹಿಸಿ ಈ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು, ನಮ್ಮ ರಾಜ್ಯಕ್ಕೆ ಕಾವೇರಿ ನೀರಿನ ವಿಚಾರವಾಗಿ ಶಾಶ್ವತವಾದ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದರು.

ಇಂದಿನ ಸಹಿ ಸಂಗ್ರಹ ದಲ್ಲಿ ಎಂ.ಜೆ ಸುರೇಶ್ ಗೌಡ , ತೇಜೇಶ್ ಲೋಕೇಶ್ ಗೌಡ, ಮೂಗೂರು ನಂಜುಂಡಸ್ವಾಮಿ, ಮಂಜುಳಾ, ಪ್ರಭುಶಂಕರ, ವರಕೂಡು ಕೃಷ್ಣೇಗೌಡ, ರಮೇಶ್ ,ಶಿವಲಿಂಗಯ್ಯ, ನೇಹಾ, ಹನುಮಂತೇಗೌಡ, ಸಿಂದುವಳ್ಳಿ ಶಿವಕುಮಾರ್, ಆಟೋ ಮಹಾದೇವ, ಅಶೋಕ್, ನಾಗರಾಜ್, ಕೃಷ್ಣಪ್ಪ, ಹನುಮಂತಯ್ಯ ,ಪ್ರಭಾಕರ, ಬಾಲು, ರವೀಶ್, ಭಾಗ್ಯಮ್ಮ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post