ಸಾಂದರ್ಭಿಕ ಚಿತ್ರ
ಮೈಸೂರು: ಕಾಡಿನಿಂದ ನಾಡಿನತ್ತ ಬರುತ್ತಿರುವ ಹುಲಿಗಳ ಸೆರೆ ಹಿಡಿಯಲು ಆನೆಗಳನ್ನು ಬಳಸಿಕೊಂಡು ಮೂರು ಕಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಪರಮೇಶ್ ಮಾಹಿತಿ ನೀಡಿದ್ದಾರೆ.
ನಾಗರಹೊಳೆ,ಬಂಡೀಪುರ ಸೇರಿದಂತೆ ಮೈಸೂರು ವಲಯ ವ್ಯಾಪ್ತಿಯಲ್ಲಿ 20 ಹುಲಿಗಳು ಕಾಡಿನಿಂದ ಹೊರಗಡೆ ಬಂದಿವೆ ಎಂದು ಅಂದಾಜಿಸಲಾಗಿದೆ ಆದರೆ ಎಲ್ಲಾ ಹುಲಿಗಳನ್ನು ಹಿಡಿಯುವ ಅಗತ್ಯವಿಲ್ಲ ಅವಾಗಿಯೇ ವಾಪಸ್ ಹೋಗಲಿವೆ ಆದರೆ ಕಾಡಿಂದ ತುಂಬಾ ದೂರ ಇರುವಂತಹ ಹುಲಿಗಳನ್ನು ಮಾತ್ರವೇ ಹಿಡಿಯುತ್ತೇವೆ,ಸ್ಥಳೀಯ ಜನರನ್ನ ವಿಶ್ವಾಸಕ್ಕೆ ಪಡೆದು ಈಗಾಗಲೇ ಐದು ಹುಲಿಗಳನ್ನು ಹಿಡಿದಿದ್ದೇವೆ ಅವುಗಳೊಂದಿಗೆ ಸ್ವಲ್ಪ ಮರಿಗಳು ಕೂಡ ಇವೆ. ಮೂರ್ ಕಡೆ ಕೋಂಬಿನ್ ಕಾರ್ಯಾಚರಣೆ ನಡೆಯುತ್ತಿದೆ,ಸಾಕು ಆನೆಗಳನ್ನು ಬಳಸಿ ಹುಲಿಗಳನ್ನು ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ ಎಂದರು.
ನರಭಕ್ಷಕ ಹುಲಿಗಳಿಲ್ಲ:
ಹುಲಿಗಳು ಮನುಷ್ಯನ ಮೇಲೆ ಅವಾಗಿಯೇ ದಾಳಿ ಮಾಡುವುದಿಲ್ಲ, ಮಾನವನ ತಪ್ಪಿನಿಂದಾಗಿಯೇ ದುರ್ಘಟನೆಗಳು ನಡೆಯುತ್ತವೆ. ವರ್ಷಕ್ಕೆ ಎರಡು ಮೂರು ಘಟನೆಗಳು ಆಗುತ್ತಲೇ ಇರುತ್ತವೆ ಅದನ್ನು ತಡೆಗಟ್ಟಲು ಪ್ರಯತ್ನ ಮಾಡುತ್ತಿದ್ದೇವೆ.ನರಭಕ್ಷಕ ಎನ್ನುವ ಯಾವುದೇ ಪ್ರಾಣಿಯು ಇಲ್ಲ ಹಾಗಾಗಿ ಹುಲಿ ನರಭಕ್ಷಕವಲ್ಲ,ಪ್ರಾಣಿಗಳ ರೀತಿ ಕುಳತಿದ್ದಾಗ ಇಲ್ಲವೇ ಸಾಕು ಪ್ರಾಣಿಗಳನ್ನು ಹುಲಿಯಿಂದ ರಕ್ಷಿಸಲು ಮುಂದಾದಾಗ,ಅಥವಾ ಹುಲಿಯ ಸಮೀಪಕ್ಕೆ ಮಾನವರೇ ತೆರಳಿದಾಗ ದುರ್ಘಟನೆಗಳು ನಡೆಯುತ್ತವೆ ಎಂದರು.
ನಾಡಿನತ್ತ ಬರಲು ಕಾರಣ:
ಬಂಡಿಪುರ ನಾಗರಹೊಳೆಯಲ್ಲಿ 900 ಸ್ಕ್ವಯರ್ ಕಿಲೋಮೀಟರ್ ಹುಲಿ ಸಂರಕ್ಷಿತ ಪ್ರದೇಶವಿದೆ ಹಲವು ವಿಭಾಗಗಳು ಇವೆ ಇಲ್ಲಿ 20 ಹುಲಿಗಳ ವಾಸಸ್ಥಾನ ಇದೆ ಮೊದಲಿಂದಲೂ ಕೆಲ ಹುಲಿಗಳು ಕಾಡಿನಿಂದ ಹೊರಗಡೆ ಬರುವಂತಹ ಚಿತ್ರಣ ಇದ್ದೇ ಇದೆ. ಪೊದೆಗಳ ಬಳಿ ನೆಲೆ ಕಂಡುಕೊಳ್ಳುತ್ತವೆ ಮರಿಗಳನ್ನು ಸಾಕಲು ಯೋಗ್ಯ ಜಾಗ ಹುಡುಕುತ್ತಾ, ಕುಡಿಯುವ ನೀರು ಸಿಕ್ಕಾಗ ಇವು ಹೊರಗಡೆ ಬರುತ್ತಾ ಇರುತ್ತವೆ. ಮತ್ತೆ ಕೆಲವು ಟೆರಿಟೆರಿಗಾಗಿ ನಡೆಯುವ ಕಾದಾಟದಲ್ಲಿ ಸೋತ ಹುಲಿ, ಗಾಯಗೊಂಡ ಹುಲಿ ಆ ಜಾಗ ಬಿಟ್ಟು ಬೇರೆ ಕಡೆ ಹೋಗುವಾಗಲೂ ನಾಡಿನತ್ತ ಬರಬಹುದು ಎಂದರು.

