ಮೈಸೂರು, ಜು.15: ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ
ಮಹಾರಾಣಿ ಕೆಂಪನಂಜಮ್ಮಣ್ಣಿ ಪುಣ್ಯಸ್ಮರಣೆ, ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಅಂಗವಾಗಿ ವೃದ್ಧಾಶ್ರಮದಲ್ಲಿ ಹಣ್ಣು ವಿತರಣೆ ಮಾಡಲಾಯಿತು.
ಮೈಸೂರಿನ ಕನಕಗಿರಿ ಸುಯೇಜ್ ಫಾರಂ ರಸ್ತೆಯಲ್ಲಿರುವ ಭಾರತೀ ವೃದ್ದಾಶ್ರಮದ ಹಿರಿಯ ನಾಗರಿಕರಿಗೆ ಹಣ್ಣುಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಮೈಸೂರು ನಗರ ಜೆ.ಡಿ.ಎಸ್. ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಅವರು, ಕೆ.ಆರ್.ಎಸ್. ಅಣೆಕಟ್ಟು ಕಟ್ಟುವಾಗ ಹಣಕಾಸಿನ ಕೊರತೆಯಾದಾಗ ತಮ್ಮ ಮೈ ಮೇಲಿದ್ದ ಒಡವೆ ಮಾರಿ ಅಣೆಕಟ್ಟು ಪೂರ್ಣಗೊಳ್ಳಲು ಸಹಾಯ ಮಾಡಿದ ನಮ್ಮ ಹೆಮ್ಮೆಯ ಮಹಾರಾಣಿ ಕೆಂಪ ನಂಜಮ್ಮಣ್ಣಿ ಯವರ ಪುಣ್ಯಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ನಾಡಿಗೆ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ, ಸಾಹಿತ್ಯ ಕಲೆ, ಸಂಗೀತ, ವಾಸ್ತುಶಿಲ್ಪಕ್ಕೆ ಅವರು ನೀಡಿದ ಆಧ್ಯತೆ,ಅವರ ಆಡಳಿತ ಈಗಿನ ರಾಜಕಾರಣಿಗಳಿಗೆ ಮಾದರಿ ಎಂದು ಬಣ್ಣಿಸಿದರು.