Thu. Dec 26th, 2024

ತಾಯೂರು ವಿಟ್ಟಲ ಮೂರ್ತಿ ಅವರಿಗೆ ಸಂತಾಪ

Share this with Friends

ಮೈಸೂರು, ಜು.11: ಹಿರಿಯ ಕನ್ನಡ ಹೋರಾಟಗಾರರಾದ ತಾಯೂರು ವಿಟ್ಟಲ ಮೂರ್ತಿ ಅವರಿಗೆ ಕನ್ನಡಪರ‌ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿದವು.

ಕಾವೇರಿ ಕ್ರಿಯಾಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಂತಾಪ ಸಭೆಯಲ್ಲಿ ತಾಯೂರು ವಿಟ್ಟಲ ಮೂರ್ತಿ ಅವರ ಹೋರಾಟಗಳನ್ನು ಸ್ಮರಿಸಲಾಯಿತು.

ಕನ್ನಡ ಚಳವಳಿ ಹಿರಿಯ ನಾಯಕರಾದ
ವಾಟಾಳ್ ನಾಗರಾಜ್ ಅವರ ಆತ್ಮೀಯರೂ ಮೈಸೂರು ಜಿಲ್ಲೆಯ ಹಿರಿಯ ಹೋರಾಟಗಾರರಾದ ತಾಯೂರು ವಿಟ್ಟಲ ಮೂರ್ತಿರವರ ನಿಧನದಿಂದ ಕನ್ನಡ ಪರ ಹೋರಾಟದ ಕೊಂಡಿ ಕಳಚಿದಂತಾಗಿದೆ ಎಂದು ತೀವ್ರ ದುಃಖ ವ್ಯಕ್ತಪಡಿಸಲಾಯಿತು.

ಸಂತಾಪ ಸಭೆ ಕಾವೇರಿ ಕ್ರಿಯಾಸಮಿತಿ ಅಧ್ಯಕ್ಷ ಜೈ ಪ್ರಕಾಶ್ ಅಧ್ಯಕ್ಷತೆಯಲ್ಲಿ ನೆರವೇರಿತು.

ತಾಯುರು‌ ಅವರ ಒಡನಾಡಿಗಳಾದ ಮೂಗೂರು ನಂಜುಂಡಸ್ವಾಮಿ ಅವರು ತಾಯೂರು ಅವರನ್ನು ನೆನೆದು ಬಹಳ ವಿಚಾರಧಾರೆಗಳನ್ನು ಹಂಚಿಕೊಂಡರು.

ಸಂತಾಪ ಸಭೆಯಲ್ಲಿ ಮೆಲ್ಲಹಳ್ಳಿ ಮಹದೇವ ಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಸುರೇಶ್ ಗೌಡ, ವರಕೂಡು ಕೃಷ್ಣೇಗೌಡ, ಪ್ರಭುಶಂಕರ್, ನಾಗರಾಜ್, ಭಾಗ್ಯಮ್ಮ, ಶ್ರೀನಿವಾಸ್, ಹನುಮಂತಯ್ಯ, ರವೀಶ್ , ಬಾಲು, ವಿಷ್ಣು, ಕೃಷ್ಣಪ್ಪ, ಪ್ರಭಾಕರ್, ಆಟೋ ಮಹದೇವ್ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post