Mon. Dec 23rd, 2024

ಸಿ. ಹೆಚ್. ವಿಜಯಶಂಕರ್ ಅವರಿಗೆ ಅಭಿನಂದನೆ

Share this with Friends

ಮೈಸೂರು, ಜು.28: ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಸಿ. ಹೆಚ್. ವಿಜಯಶಂಕರ್ ಅವರನ್ನು ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ಅಭಿನಂದಿಸಲಾಯಿತು.

ಮೈಸೂರಿನ ವಿಜಯನಗರದಲ್ಲಿರುವ ವಿಜಯಶಂಕರ್ ಅವರ ನಿವಾಸಕ್ಕೆ ಬಿಜೆಪಿ ಮಂಡಲ‌ ಸದಸ್ಯರು ತೆರಳಿ ಅಭಿನಂದಿಸಿ ಶುಭ ಹಾರೈಸಿದರು.

ಮಂಡಲದ ಅಧ್ಯಕ್ಷ ರಾಕೇಶ್ ಭಟ್, ನಗರ ಕಾರ್ಯದರ್ಶಿ ಬಾಲಕೃಷ್ಣ, ಮಂಡಲ ಉಪಾಧ್ಯಕ್ಷ ಬಿ ಸಿ ಶಶಿಕಾಂತ್,
ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಶುಭಶ್ರೀ, ರವಿ ಅರಸ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದನ್ ಗೌಡ, ಮುಖಂಡರಾದ ಮಹದೇವ್ ಮತ್ತಿತರರು ನೂತನ‌ ರಾಜ್ಯಪಾಲರನ್ನು ಹೂಗುಚ್ಛ ನೀಡಿ ಶುಭ ಕೋರಿದರು.


Share this with Friends

Related Post