ಮೈಸೂರು,ಜೂ.11: ಕರ್ನಾಟಕ ವೈದ್ಯಕೀಯ ಪರಿಷತ್ ಗೆ ನಾಮನಿರ್ದೇಶಕ ಸದಸ್ಯರಾಗಿ ನೇಮಕವಾಗಿರುವ ಡಾ. ಭರತ್ ಕುಮಾರ್ ಅವರಿಗೆ ಕೃಷ್ಣರಾಜ ಯುವ ಬಳಗ ಅಭಿನಂದಿಸಿದೆ.
ಕರ್ನಾಟಕ ಸರ್ಕಾರದ ಮುಂದಿನ 5 ವರ್ಷದ ಅವಧಿಗೆ ಶ್ರೀರಾಂಪುರ ನಿವಾಸಿ ಸರ್ಕಾರಿ ವೈದ್ಯ ಡಾ. ಭರತ್ ಕುಮಾರ್ ಅವರನ್ನು ಕರ್ನಾಟಕ ವೈದ್ಯಕೀಯ ಪರಿಷತ್ ಗೆ ಸದ್ಯಸರನ್ನಾಗಿ ನೇಮಕ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಕೃಷ್ಣರಾಜ ಯುವ ಬಳಗದ ವತಿಯಿಂದ ಲಕ್ಷ್ಮಿಪುರಂ ಅವರ ಕಚೇರಿಯಲ್ಲಿ ಹೂ ಗೊಚ್ಚ ನೀಡಿ ಅಭಿನಂದನೆ ಸಲ್ಲಿಸಲಾಯಿತು.
ಈ ವೇಳೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ ಬಸಪ್ಪ, ಮಲ್ಲೇಶ್, ಲೋಕೇಶ್ ಕುಮಾರ್ ಮಾದಾಪುರ, ಶ್ರೇಯಸ್, ಚೇತನ್, ತೇಜಸ್, ಎಸ್. ಎನ್ ರಾಜೇಶ್, ಜಿ ರಾಘವೇಂದ್ರ, ರಾಕೇಶ್ ಮತ್ತಿತರರು ಡಾ. ಭರತ್ ಕುಮಾರ್ ಅಭಿನಂದಿಸಿ ಶುಭ ಕೋರಿದರು.