Mon. Dec 23rd, 2024

ದಿ.ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ

Share this with Friends

ಬೆಂಗಳೂರು ಮಾ.31: ಕೇಂದ್ರ ಸಚಿವರಾಗಿದ್ದ
ದಿ.ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಭೇಟಿಮಾಡಿ ಆಶೀರ್ವಾದ ಪಡೆದರು.

ಇಂದು ಮುಂಜಾನೆ ಲಾಲ್ ಬಾಗ್ ನಲ್ಲಿ ವಾಯುವಿಹಾರ ಮಾಡುವ ವೇಳೆ ಮಾಜಿ ಕೇಂದ್ರ ಸಚಿವರು, ಮುತ್ಸದ್ದಿ ನಾಯಕರೂ ಆದ ದಿವಂಗತ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ಭೇಟಿಯಾದ ಸೌಮ್ಯ ರೆಡ್ಡಿ ಅವರ ತೇಜಸ್ವಿನಿಯವರ ಕಾಲು ಮುಟ್ಟಿ‌ ನಮಸ್ಕರಿಸಿ ಆಶೀರ್ವಾದ ಪಡೆದು ನಂತರ ಕುಶಲೋಪರಿ ವಿಚಾರಿಸಿದರು.

ಅದಮ್ಯ ಚೇತನ ಸಂಸ್ಥೆಯ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ತೇಜಸ್ವಿನಿಯವರು ಎಲ್ಲಾ ಮಹಿಳೆಯರಿಗೂ ಆದರ್ಶಪ್ರಾಯರು. ಬಡವರು, ನೊಂದವರ ಬಗ್ಗೆ ಅವರಿಗಿರುವ ಅಪಾರ ಕಾಳಜಿಯ ಪ್ರಭಾವಕ್ಕೆ ಒಳಗಾದವರಲ್ಲಿ ನಾನೂ ಒಬ್ಬಳಾಗಿದ್ದೇನೆ ಎಂದು ಸೌಮ್ಯ ರೆಡ್ಡಿ ಹೇಳಿದರು.

ಪಕ್ಷಾತೀತವಾಗಿ ಜನರೊಂದಿಗೆ ಕೆಲಸ ಮಾಡುವ ಜೊತೆಗೆ ನಾವು ಭೇಟಿಯಾದಾಗಲೆಲ್ಲಾ ನನಗೆ ಸಲಹೆ ಮತ್ತು ಆಶೀರ್ವಾದವನ್ನು ನೀಡುತ್ತಿದ್ದ ಅದ್ಭುತ ವ್ಯಕ್ತಿ ಶ್ರೀ ಅನಂತ್ ಕುಮಾರ್ ಅವರು ಎಂದು ಬಣ್ಣಿಸಿದರು.

ತೇಜಸ್ವಿನಿ ಅವರ ಪ್ರೋತ್ಸಾಹದಾಯಕ ಮಾತುಗಳು ಮತ್ತು ಆಶೀರ್ವಾದಗಳು ನನಗೆ ನಿಜವಾಗಿಯೂ ಸ್ಫೂರ್ತಿ ನೀಡಿವೆ. ಅಂತಹ ಉತ್ತೇಜಕ ಕ್ಷಣಗಳಿಗೆ ಕೃತಜ್ಞರಾಗಿರುತ್ತೇನೆ ಎಂದು ಸೌಮ್ಯ ಹೇಳಿದರು.


Share this with Friends

Related Post