Mon. Dec 23rd, 2024

ಕಾಂಗ್ರೆಸ್ ಸರ್ಕಾರದ ಭಷ್ಟಾಚಾರ ಮೇರೆ ಮೀರಿದೆ:ಬಿ.ವೈ.ವಿಜಯೇಂದ್ರ ವಾಗ್ದಾಳಿ

Share this with Friends

ಮೈಸೂರು,ಆ.3: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಹಿಂದ ಹೆಸರು ಹೇಳಿ ಅಧಿಕಾರ ಹಿಡಿದು ಆ ವರ್ಗಕ್ಕೆ ದ್ರೋಹ ಬಗೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದರು.

ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ದದ ಪಾದಯಾತ್ರೆ ಯಶಸ್ವಿಗೆ ತಾಯಿ ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಿ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮಿತಿಮೀರಿದೆ, ತುಳಿತಕ್ಕೆ ಒಳಗಾದ ವರ್ಗಕ್ಕೆ ನ್ಯಾಯ ಸಿಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮುಡಾ, ವಾಲ್ಮೀಕಿ ಹಗರಣ,
ಎಸ್ ಸಿ ಪಿ ಟಿ ಎಸ್ ಪಿ ಹಣ ದುರ್ಬಳಕೆ ಸೇರಿದಂತೆ ಹಲವು ವಿಚಾರ ಇಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.

ವಿಜಯೇಂದ್ರ ವಿರುದ್ಧ ಡಿಕೆಶಿ ಏಕವಚನ ಬಳಕೆ ಮಾಡಿದ್ದಾರಲ್ಲಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅಧಿಕಾರ ಬಂದಾಗ ಕಾಂಗ್ರೆಸ್‌ನವರಿಗೆ ಈ ರೀತಿ ಆಗುತ್ತೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ಪಾದಯಾತ್ರೆ ಮೊಟಕಾಗುವ ಪ್ರಶ್ನೆ ಇಲ್ಲ, ಕಾಂಗ್ರೆಸ್‌ನವರದ್ದು ಪಶ್ಚಾತ್ತಾಪದ ಯಾತ್ರೆ, ಕೊಟ್ಟ ಭರವಸೆ ಈಡೇರಿಸಲು ಆಗಲಿಲ್ಲ ಎಂಬ ಪಶ್ಚಾತ್ತಾಪದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಭ್ರಷ್ಟಾಚಾರ ಸಮರ್ಥನೆಗೆ ಸರ್ಕಾರವೇ ಇಳಿದಿದೆ,ನಾವು
ಬಿಜೆಪಿ ಜೆಡಿಎಸ್ ನಿಂದ ಬೃಹತ್ ಪಾದಯಾತ್ರೆ‌ ಮಾಡಿ ಜನರಲ್ಲಿ ಈ ಕುರಿತು ಜಾಗೃತಿ ಮೂಡಿಸುತ್ತೇವೆ ಎಂದು ವಿಜಯೇಂದ್ರ ತಿಳಿಸಿದರು.

ಇಂದಿನಿಂದ ಆಗಸ್ಟ್ 10ರ ತನಕ ಪಾದಯಾತ್ರೆ ಮಾಡಿ ಬಳಿಕ ಮೈಸೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತೇವೆ ಎಂದು ಹೇಳಿದರು.

ಪಾದಯಾತ್ರೆ ಯಶಸ್ವಿಗೆ ತಾಯಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.


Share this with Friends

Related Post