Mon. Jan 13th, 2025

ಬಿಜೆಪಿ ಅಲೆ ಕಂಡು ಕಾಂಗ್ರೆಸ್ ಗಾಬರಿ:ಬಿ.ವೈ ವಿಜಯೇಂದ್ರ

Share this with Friends

ಮೈಸೂರು, ಏ.21: ನಮ್ಮ ಪಕ್ಷದ ಅಲೆ ಕಂಡು ರಾಜ್ಯ ಕಾಂಗ್ರೆಸ್ ಸರ್ಕಾರ ಗಾಬರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಮೈಸೂರಿನಲ್ಲಿ ಭಾನುವಾರ ಮಹಾ ಸಂಪರ್ಕ ಅಭಿಯಾನ ಉದ್ಘಾಟಿಸಿದ ವೇಳೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಕಂಡು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ಸಿಗರು ಗಾಬರಿಯಾಗಿದ್ದಾರೆ. ರಾಜ್ಯ ಸೇರಿದಂತೆ ದೇಶದಾದ್ಯಂತ ಎಲ್ಲೇ ಹೋದರು ಎಲ್ಲರೂ ಮೋದಿ ಅವರನ್ನು ಈ ಬಾರಿಯೂ ಪ್ರಧಾನಿ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ಇಂದು ಮೈಸೂರಿನಲ್ಲಿ ಎಲ್ಲಾ ಬೂತ್ ಗಳಲ್ಲಿ ಮಹಾ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಲಾಗಿದೆ. ಬೆಳಗಿನಿಂದಲೂ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಬೂತ್ ವ್ಯಾಪ್ತಿಯಲ್ಲಿ ಮನೆಗಳಿಗೆ ತೆರಳಿ ಬಿಜೆಪಿಗೆ ಏಕೆ ಮತ ಹಾಕಬೇಕು ಈ ಬಾರಿಯೂ ಮೋದಿಯವರನ್ನು ಮತ್ತೆ ಏಕೆ ಪ್ರಧಾನಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿ ನಮ್ಮ ಅಭ್ಯರ್ಥಿಗಳನ್ಯ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ ಎಂದು ವಿಜೇಂದ್ರ ತಿಳಿಸಿದರು.

ಮೈಸೂರು ನಗರ ಬಿಜೆಪಿ ಅಧ್ಯಕ್ಷ ನಾಗೇಂದ್ರ, ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ದಿನೇಶ್ ಗೌಡ, ಮೈಸೂರ್ ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್,ಆರ್ ಪರಮೇಶ್,ಮೈಕಾ ಪ್ರೇಮ್ ಕುಮಾರ್, ರಾಜೇಂದ್ರ, ವಿಜ್ಞೇಶ್ವರ ಭಟ್, ಶ್ರೀನಿವಾಸ್, ಸುದರ್ಶನ್, ಸುರೇಂದ್ರ, ಚರಣ್, ಕಿರಣ್ , ಬದ್ರಿ, ಲಕ್ಷ್ಮಿ, ಶ್ರೀ ಲಕ್ಷ್ಮಿ, ಗೀತಾ, ಪದ್ಮ, ಸುಲೋಚನಾ, ಹಾಗೂ ಕಾರ್ಯಕರ್ತರು ಹಾಜರಿದ್ದರು.


Share this with Friends

Related Post