Sat. Apr 19th, 2025

ಸಿದ್ದರಾಮಯ್ಯ ಪರ ನಿಂತ ಕೈ ಪಡೆ: ಸಿಎಂ ಪರ ಡಿಕೆಶಿ‌ ಬ್ಯಾಟಿಂಗ್

Share this with Friends

ಮಂಡ್ಯ,ಆ.5: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಕೌಂಟರ್‌ ಕೊಡಲು ಎರಡು ದಿನಗಳ ಕಾಲ ಕಾಂಗ್ರೆಸ್‌ ಜನಾಂದೋಲನ ಆರಂಭಿಸಿದ್ದು ಕೈ ಪಡೆ‌ ಸಿಎಂ ಸಿದ್ದರಾಮಯ್ಯ ಪರ ನಿಂತಿದೆ.

ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಜನಾಂದೋಲನ ಸಮಾವೇಶ ಮೊದಲ ದಿನ ಕಾಂಗ್ರೆಸ್‌ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟ್‌ ಬೀಸಿದ್ದಾರೆ.

ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಮಾತನಾಡಿ, ಸಿದ್ದರಾಮಯ್ಯ ಮಾಡಬಾರದ ತಪ್ಪು ಮಾಡಿದ್ದಾರಾ,ಅಥವಾ ಕಳ್ಳತನ ಮಾಡಿದ್ದಾರ, ಸರ್ಕಾರಿ ಜಮೀನು ಹೊಡೆದಿದ್ದಾರ, ಸರ್ಕಾರ ಜಮೀನು ಪಡೆದು ಬೇರೆ ಜಾಗ ಕೊಟ್ಟಿದೆ ಅದರಲ್ಲಿ ತಪ್ಪೇನಿದೆ ಎಂದು ಕಾರವಾಗಿ ಪ್ರಶ್ನಿಸಿದರು.

ನಿಮ್ಮ ಸರ್ಕಾರದಲ್ಲಾದ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಿ ಎಂದು ಬಿಜೆಪಿಗರನ್ನು ಆಗ್ರಹಿಸಿದ ಡಿ ಕೆಶಿ, ಆನಂತರ ಪಾದಯಾತ್ರೆ ಮಾಡಿ. ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ ತಿಳ್ಕೊಳ್ಳಿ ಎಂದು ಗುಡುಗಿದರು.

ಹಿಂದುಳಿದ ವರ್ಗದ ನಾಯಕ ಮತ್ತೆ ಸಿಎಂ ಆಗಿದ್ದು ನಿಮಗೆ ಸಹಿಸಲು ಆಗ್ತಿಲ್ಲ ಅಲ್ವಾ ಅದಕ್ಕೇ‌ ಹೀಗಾಡ್ತಾ ಇದೀರಾ ಎಂದು ಚಾಟಿ ಬೀಸಿದರು.


Share this with Friends

Related Post