Fri. Mar 6th, 2026

ಬೇಸಿಗೆ ರಜೆ: ಮೈಸೂರು – ಅಜ್ಮೀರ್ ನಡುವಿನ ರೈಲು ಸೇವೆ ಮುಂದುವರಿಸಲು ನಿರ್ಧಾರ

Share this with Friends

ಮೈಸೂರು:  ಮುಂಬರುವ ಹೋಳಿ ಹುಣ್ಣಿಗೆ ಹಾಗೂ ಬೇಸಿಗೆ ರಜೆಯ ಕಾರಣದಿಂದಾಗಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ, ರೈಲ್ವೇ ಬೋರ್ಡ್ ರೈಲು ಸಂಖ್ಯೆ 06281/06282 ಮೈಸೂರು – ಅಜ್ಮೀರ್ – ಮೈಸೂರು ಎಕ್ಸ್ಪ್ರೆಸ್ ವಿಶೇಷ ರೈಲು ಸೇವೆಯನ್ನು ಮುಂದುವರಿಸಲು ತೀರ್ಮಾನಿಸಿದೆ.

ಈ ರೈಲು ಈಗಿನ ಮಾರ್ಗ, ನಿಲ್ದಾಣಗಳು, ಶುಲ್ಕ ವ್ಯವಸ್ಥೆ ಹಾಗೂ ಕೋಚ್ ಸಂಯೋಜನೆಯನ್ನು ಉಳಿಸಿಕೊಂಡು, ಪಶ್ಚಿಮ ರೈಲ್ವೇ ವ್ಯಾಪ್ತಿಯಲ್ಲಿ ಪರಿಷ್ಕೃತ ವೇಳಾಪಟ್ಟಿಯೊಂದಿಗೆ ಒಟ್ಟು 17 ಹೆಚ್ಚುವರಿ ಪ್ರಯಾಣಗಳನ್ನು ನಡೆಸಲಿದೆ. ಜೊತೆಗೆ, ಈ ಸೇವೆಯನ್ನು ಉತ್ತರ ಪಶ್ಚಿಮ ರೈಲ್ವೇ ವ್ಯಾಪ್ತಿಯ ಅಜ್ಮೀರ್ನಿಂದ ಮಡಾರ್ ಜಂಕ್ಷನ್ ವರೆಗೆ ವಿಸ್ತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಸಂಖ್ಯೆ 06281 ಮೈಸೂರು – ಮಡಾರ್ ಜಂಕ್ಷನ್ ಎಕ್ಸ್ಪ್ರೆಸ್ ವಿಶೇಷ, ಇದನ್ನು ಮೊದಲಿನಿಂದಲೇ 31.01.2026ರವರೆಗೆ ಸಂಚರಿಸಲು ಅಧಿಸೂಚಿಸಲಾಗಿದ್ದು, ಇದೀಗ 07, 14, 21 ಮತ್ತು 28 ಫೆಬ್ರವರಿ 2026; 07, 14, 21 ಮತ್ತು 28 ಮಾರ್ಚ್ 2026; 04, 11, 18 ಮತ್ತು 25 ಏಪ್ರಿಲ್ 2026; ಹಾಗೂ 02, 09, 16, 23 ಮತ್ತು 30 ಮೇ 2026 (ಶನಿವಾರಗಳು) ರಂದು ಸಂಚರಿಸಲು ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ವಸಾಯಿ ರೋಡ್ನಲ್ಲಿ 12.00/12.05 ಗಂಟೆಗೆ, ಸೂರತ್ನಲ್ಲಿ 14.43/14.48 ಗಂಟೆಗೆ, ವಡೋದರ ಜಂಕ್ಷನ್ನಲ್ಲಿ 16.20/16.25 ಗಂಟೆಗೆ, ರತ್ನಾಂ ಜಂಕ್ಷನ್ನಲ್ಲಿ 20.00/20.10 ಗಂಟೆಗೆ, ಮಂದಸೋರ್ನಲ್ಲಿ 21.25/21.27 ಗಂಟೆಗೆ, ನೀಮಚ್ನಲ್ಲಿ 22.18/22.20 ಗಂಟೆಗೆ, ಚಿತ್ತೌರ್ಗಢ ಜಂಕ್ಷನ್ನಲ್ಲಿ 00.05/00.10 ಗಂಟೆಗೆ, ಭಿಲ್ವಾರದಲ್ಲಿ 01.30/01.35 ಗಂಟೆಗೆ, ಬಿಜೈನಗರದಲ್ಲಿ 02.40/02.42 ಗಂಟೆಗೆ, ನಾಸಿರಾಬಾದ್ನಲ್ಲಿ 03.34/03.36 ಗಂಟೆಗೆ ಮತ್ತು ಅಜ್ಮೀರ್ ಜಂಕ್ಷನ್ನಲ್ಲಿ 04.15/04.25 ಗಂಟೆಗೆ ತಲುಪಿ ಹೊರಡಲಿದೆ, ಮತ್ತು ಮಡಾರ್ ಜಂಕ್ಷನ್ಗೆ ಬೆಳಿಗ್ಗೆ 05.00 ಗಂಟೆಗೆ ತಲುಪಲಿದೆ.

ರೈಲು ಸಂಖ್ಯೆ 06282 ಮಡಾರ್ ಜಂಕ್ಷನ್ – ಮೈಸೂರು ಎಕ್ಸ್ಪ್ರೆಸ್ ವಿಶೇಷ, ಇದನ್ನು ಮೊದಲಿನಿಂದಲೇ 02.02.2026ರವರೆಗೆ ಸಂಚರಿಸಲು ಅಧಿಸೂಚಿಸಲಾಗಿದ್ದು, ಇದೀಗ 09, 16 ಮತ್ತು 23 ಫೆಬ್ರವರಿ 2026; 02, 09, 16, 23 ಮತ್ತು 30 ಮಾರ್ಚ್ 2026; 06, 13, 20 ಮತ್ತು 27 ಏಪ್ರಿಲ್ 2026; 04, 11, 18 ಮತ್ತು 25 ಮೇ 2026; ಹಾಗೂ 01 ಜೂನ್ 2026 (ಸೋಮವಾರಗಳು) ರಂದು ಸಂಚರಿಸಲು ವಿಸ್ತರಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ, ಈ ರೈಲು ಮಡಾರ್ ಜಂಕ್ಷನ್ನಿಂದ ಸಂಜೆ 18.20 ಗಂಟೆಗೆ ಹೊರಟು, ಅಜ್ಮೀರ್ ಜಂಕ್ಷನ್ಗೆ 18.40 ಗಂಟೆಗೆ ತಲುಪಿ 18.50 ಗಂಟೆಗೆ ಹೊರಡಲಿದೆ. ನಂತರ ನಾಸಿರಾಬಾದ್ 19.36/19.38 ಗಂಟೆ, ಬಿಜೈನಗರ 20.20/20.22 ಗಂಟೆ, ಭಿಲ್ವಾರ 21.30/21.35 ಗಂಟೆ, ಚಿತ್ತೌರ್ಗಢ ಜಂಕ್ಷನ್ 23.35/23.45 ಗಂಟೆ, ನೀಮಚ್ 00.57/00.59 ಗಂಟೆ, ಮಂದಸೋರ್ 01.44/01.49 ಗಂಟೆ, ರತ್ನಾಂ ಜಂಕ್ಷನ್ 03.50/04.00 ಗಂಟೆ, ವಡೋದರ ಜಂಕ್ಷನ್ 07.40/07.50 ಗಂಟೆ, ಸೂರತ್ 10.05/10.10 ಗಂಟೆ ಮತ್ತು ವಸಾಯಿ ರೋಡ್ 13.20/13.25 ಗಂಟೆಗೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿ, ನಂತರ ಮೈಸೂರಿನತ್ತ ಮುಂದುವರಿಯಲಿದೆ.


Share this with Friends

Related Post