ಮೈಸೂರು: ಯೋಗ ನಮ್ಮ ಋಷಿಮುನಿಗಳ ಕೊಡುಗೆ ಎಂದು ಆರ್ಟ್ ಆಫ್ ಲಿವಿಂಗ್ ಮೈಸೂರು ವಿಭಾಗದ ಕಾರ್ಯನಿರ್ವಾಹಕರಾದ
ಶ್ರೀ ದಿವ್ಯಪಾದ ಸ್ವಾಮೀಜಿ ತಿಳಿಸಿದರು
ಮೈಸೂರಿನ ಲಲಿತಾದ್ರಿಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಮೈಸೂರು ವಿಭಾಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಧ್ಯಾನ ದಿನಾಚರಣೆ ವೇಳೆ ಅವರು ಮಾತನಾಡಿದರು.
ಅಂದಿನಿಂದ ಇಂದಿನವರೆಗೂ ಯೋಗ,ಧ್ಯಾನವನ್ನು ಉಳಿಸಿಕೊಂಡು ಬರಲಾಗಿದೆ,ಇದು ದ್ಯಾನಕ್ಕಿರುವ ಮಹತ್ವವನ್ನು ತೋರಿಸುತ್ತದೆ ಎಂದು ಹೇಳಿದರು.
ಮನಸ್ಸು ಮತ್ತು ದೇಹದ ಸಮತೋಲನ ಕಾಯ್ದು ಕೊಳ್ಳಲು ಯೋಗ ಹಾಗೂ ಧ್ಯಾನ ಅತ್ಯವಶ್ಯಕ ಎಂದು ಸ್ವಾಮೀಜಿ ತಿಳಿಸಿದರು.
ಗುರುದೇವ ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ಧ್ಯಾನ ಅಧಿವೇಶನವನ್ನು
ಆರ್ಟ್ ಆಫ್ ಲಿವಿಂಗ್ ಮೈಸೂರು ವಿಭಾಗದ ಕಾರ್ಯನಿರ್ವಾಹಕರಾದ
ಶ್ರೀ ದಿವ್ಯಪಾದ ಸ್ವಾಮೀಜಿ ನೇತೃತ್ವದಲ್ಲಿ ಹಮ್ಮಿಕೊಂಡು ಧ್ಯಾನದಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಚಾಮುಂಡಿ ಬೆಟ್ಟದ ಸಿಇಒ ರೂಪ, ನಿವೃತ್ತ ಎಸ್ ಪಿ ಶಂಕರೇಗೌಡ, ಉದ್ಯಮಿ ಚರಣ್ ರಾಜ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಬಿ ಆರ್ ಪೈ, ಕೊಡವ ಸಮಾಜದ ಅಧ್ಯಕ್ಷರಾದ
ಶೆರ್ರಿ ಬೆಳ್ಳಿಯಪ್ಪ, ಡಾ.ಸುಷ್ಮಾ ಕೃಷ್ಣಮೂರ್ತಿ, ಕಾವೇರಿ ಇನ್ಸ್ಟಿಟ್ಯೂಷನ್ ಮುಖ್ಯಸ್ಥರಾದ ನವೀನ್, ಅಪೂರ್ವ ಸುರೇಶ್, ವಿಶ್ವನಾಥ್, ಶಾಂತಿ ಸಾಗರ್ ಸುರೇಶ್ ಮತ್ತಿತರರು ಭಾಗವಹಿಸಿದ್ದರು.