ಮೈಸೂರು, ಏ.24: ಶ್ರೀ ರಾಮನವಮಿ ದಿನದಿಂದ ಮೈಸೂರಿನ ಸಿದ್ದಾರ್ಥ ನಗರದ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ನಡೆಸಿಕೊಂಡು ಬಂದ ಕಾರ್ಯಕ್ರಮಗಳು ಇಂದು ಸಂಪನ್ನಗೊಂಡವು
ಇಂದು ಬೆಳಿಗ್ಗೆ ಶ್ರೀ ಸೀತಾರಾಮರಿಗೆ ಪಟ್ಟಾಭಿಷೇಕ ಕಾರ್ಯವನ್ನು ನೆರವೇರಿಸಲಾಯಿತು.
ಇದೇ ವೇಳೆ ಶ್ರೀ ಆನಂದ್ ಪುರೋಹಿತರು ಮತ್ತು ತಂಡದವರು ಶ್ರೀರಾಮ ತಾರಕ ಹೋಮವನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಶ್ರೀತಾರಾಮರ ಉತ್ಸವ ಮೂರ್ತಿಯನ್ನು ಮಂಟಪದಲ್ಲಿಟ್ಟು ದೇವಾಲಯದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಈ ವೇಳೆ ಎಲ್ಲಾ ಮನೆಗಳ ಮುಂದೆಯೂ ರಂಗೋಲಿ ಹಾಕಿ, ಶ್ರೀ ಸೀತಾರಾಮ ಉತ್ಸವ ಮೂರ್ತಿಗಳನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿ ಹಣ್ಣು ಕಾಯಿ ಮಾಡಿಸಿದ್ದು ವಿಶೇಷವಾಗಿತ್ತು.
ಮೆರವಣಿಗೆ ಹಿಂದೆ ಭಜನಾ ಮಂಡಳಿಯವರು ಭಜನೆ ಮಾಡುತ್ತಾ ಸಾಗಿದ್ದು ಎಲ್ಲರ ಮನಸೆಳೆಯಿತು.
ದೇವಾಲಯದ ಧರ್ಮದರ್ಶಿ ಗಿಣಿಸ್ವಾಮಿ ಮತ್ತಿತರ ಪ್ರಮುಖರು ಮೆರವಣಿಗೆಯಲ್ಲಿ ಸಾಗಿ ಬಂದರು.
ನಂತರ ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಅರ್ಚನೆ,ಮಹಾ ಮಂಗಳಾರತಿ ಮಾಡಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.