Mon. Dec 23rd, 2024

ದೇಶದ ಮಹಿಳೆಯರಿಗೆ ಕೇಂದ್ರದ ಯೋಜನೆಗಳು ಅನೂಕೂಲಕರವಾಗಿವೆ: ಶಶಿಕಲಾ‌ ಜೊಲ್ಲೆ

Share this with Friends

ಚಿಕ್ಕೋಡಿ: ಲೋಕಸಭಾ ಚುನಾವಣೆ ಅಂಗವಾಗಿ ಚಿಕ್ಕೋಡಿ ಮತಕ್ಷೇತ್ರದ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರ. ಪರ ಮಾಜಿ‌ ಸಚಿವರು ಹಾಗೂ ಶಾಸಕರಾದ ಶಶಿಕಲಾ‌ಜೊಲ್ಲೆ ಬೃಹತ ಕಾರ್ಯಕರ್ತರ ಮತ‌ ಪ್ರಚಾರ ಭಾನುವಾರ ನಿಪ್ಪಾಣಿಯಲ್ಲಿ ನಡೆಸಿದರು

ಈ ಸಮಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮತನಾಡಿದ ಅವರು ನಾರಿ ಶಕ್ತಿ ಯೋಜನೆಯಡಿ ಈ ದೇಶದ ಮಹಿಖಯರಿಗೆ ಮಾನ್ಯ ನರೇಂದ್ರ ಮೋದಿ ಸಾಕಷ್ಟು ಯೋಜನೆ ಜಾರಿಗೊಳಿಸಿಧ್ದಾರೆ. ಲಖಪತಿ‌ದಿದಿ 3 ಕೋಟಿ ಅಧಿಕ ಮಹಿಳೆಯರು ಲಕ್ಷಾಧಿಪತಿ‌ಹೊದುವ ಗುರಿ ಹೊಂದಿದೆ. ಉಜ್ವಲಾ ಯೋಜನೆ ಸೇರಿದಂತೆ ಅನೇಕ ಯೋಜನೆ ಮಹಿಳೆಯರ ಅನೂಕುಲಕರವಾಗಿವೆ. ಇನ್ನು ದೇಶದ ಮಹಿಳೆಯರ ಬಗ್ಗೆ ಅಪಾರ ಕಾಳಜಿ ಹೊಂದಿರುವ‌ ಮೋದಿಜಿಯವರು ಮಹಿಳೆಯರ ಹಕ್ಕುಗಳ ರಕ್ಷಣೆಗೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದರು‌.

ಈ ಬಾರಿ ಚಿಕ್ಕೋಡಿ ಅಭ್ಯರ್ಥಿಯಾಗಿ ಅಣ್ಣಾಸಾಹೇಬ ಜೊಲ್ಲೆಯವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿದ್ದಾರೆ ಮತ್ತೊಮ್ಮೆ ನರೇಂದ್ರ ಮೋದಿಜಿ ಅವರು ಪ್ರಧಾನಿ ಆದರೆ ದೇಶದಲ್ಲಿ‌ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಹೊಂದಲಿವೆ ಎಂದರು‌

ಈ ಸಮಯದಲ್ಲಿ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಸುರೇಶ ಹಳವನಕರ, ಸಮರಜೀತಸಿಂಹ ಘಾಟಗೆ,ಚಂದ್ರಕಾಂತ ಕೋಠಿವಾಲೆ, ಸತೀಶ ಅಪ್ಪಾಜಿಗೋಳ, ರಿಷಭ ಜೈನ, ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರು,ಉಪಾಧ್ಯಕ್ಷರು, ನಿರ್ದೇಶಕ ಮಂಡಳಿ ಸದಸ್ಯರು,ನಗರಸಭೆ ಸದಸ್ಯರು, ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಪದಾಧಿಕಾರಿಗಳು,ಸ್ಥಳೀಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.


Share this with Friends

Related Post