Thu. Dec 26th, 2024

ನೇಣುಬಿಗಿದುಕೊಂಡು ದಂಪತಿ ಆತ್ಮಹತ್ಯೆ

Share this with Friends

ಕೋಲಾರ,ಜು.11: ನೇಣುಬಿಗಿದುಕೊಂಡು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಕೋಲಾರ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಮಂಜಲಿ ಗ್ರಾಮದ ಮಾಲಾಶ್ರೀ (35), ಲಕ್ಷ್ಮಣ್ (38) ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಲಕ್ಷ್ಮಣ್ ಆಟೋ ಚಾಲಕನಾಗಿದ್ದರು ಅವರ ಪತ್ನಿ ಮಾಲಾಶ್ರೀ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ದಂಪತಿ ಪ್ರೀತಿಸಿ ವಿವಾಹವಾಗಿದ್ದರು,ಅವರಿಗೆ ಇಬ್ಬರು ಮಕ್ಕಳಿದ್ದಾರೆ.ಇವರ ಸಾವಿನಿಂದ ಮಕ್ಕಳು‌ ಅನಾಥರಾಗಿದ್ದಾರೆ.

ದಂಪತಿಯ ಸಾವಿಗೆ ಕಾರಣ ತಿಳಿದು ಬಂದಿಲ್ಲ,ಆದರೆ ಒಂದೇ ಕುಣಿಕೆಗೆ ನೇಣುಬಿಗಿದುಕೊಂಡು ಸಾವಿಗೆ‌ ಶರಣಾಗಿದ್ದಾರೆ.

ವೇಮಗಲ್ ಪೊಲೀಸ್ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post