Fri. Nov 1st, 2024

ಆಗಸ್ಟ್‌ 14ರ ತನಕ ದರ್ಶನ್‌ ಅಂಡ್ ಗ್ಯಾಂಗ್ ಗೆ ಜೈಲೇ ಗತಿ

Share this with Friends

ಬೆಂಗಳೂರು,ಆ.1: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್‌ ನ ನ್ಯಾಯಾಂಗ ಬಂಧನ ಅವಧಿಯನ್ನು ನ್ಯಾಯಾಲಯ ಆಗಸ್ಟ್‌ 14 ರವರೆಗೆ ವಿಸ್ತರಿಸಿ ಆದೇಶಿಸಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ 24ನೇ ಎಸಿಎಂಎಂ ಕೋರ್ಟ್‌ಗೆ ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ ಹಾಗೂ ತುಮಕೂರು ಜೈಲಿನಿಂದ 4 ಆರೋಪಿಗಳನ್ನ ಹಾಜರು ಪಡಿಸಲಾಗಿತ್ತು.

ದರ್ಶನ್, ಪವಿತ್ರಾಗೌಡ, ಪವನ್, ಪ್ರದೂಷ್, ವಿನಯ್, ದೀಪಕ್ ಸೇರಿ 17 ಮಂದಿಯ ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್‌ಐಟಿ ನ್ಯಾಯಾಧೀಶರ ಮುಂದೆ ರಿಮ್ಯಾಂಡ್‌ ಕಾಪಿಯನ್ನು ಸಲ್ಲಿಸಿ ಮನವಿ ಮಾಡಿತ್ತು.


Share this with Friends

Related Post