Mon. Dec 23rd, 2024

ದರ್ಶನ್ ಆ್ಯಂಡ್ ಗ್ಯಾಂಗ್​ ಮತ್ತೆ 14 ದಿನ ಜೈಲು ಪಾಲು

Share this with Friends

ಬೆಂಗಳೂರು, ಜು.18: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಮತ್ತು ಗ್ಯಾಂಗ್​ಗೆ ಕೋರ್ಟ್ ಮತ್ತೆ ಶಾಕ್ ನೀಡಿದೆ.

ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದ್ದು, ನಟ ದರ್ಶನ್​ಗೆ ಮತ್ತೆ 14 ದಿನ ಜೈಲೇ ಗತಿ ಆಗಿದೆ.

ನಟ ದರ್ಶನ್,ಪವಿತ್ರಾ‌ಗೌಡ ಹಾಗೂ ಇತರ ಆರೋಪಿಗಳ ನ್ಯಾಯಾಂಗ ಬಂಧನ ಅಂತ್ಯಗೊಂಡ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯ, ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.

ಎರಡೂ ಕಡೆಯ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆಗಸ್ಟ್ 1ರ ವರೆಗೂ ದರ್ಶನ್ ಆ್ಯಂಡ್ ಗ್ಯಾಂಗ್​ಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಹಾಗಾಗಿ 14 ದಿನಗಳ ಕಾಲ ನಟ ದರ್ಶನ್ ಮತ್ತು ಗ್ಯಾಂಗ್ ಗೆ ಜೈಲೇ ಗತಿ ಆಗಿದೆ.

ನಟ ದರ್ಶನ್​ಗೆ ಜಾಮೀನು ನೀಡದಿರಲು 13 ಕಾರಣಗಳಿರುವ ವರದಿಯನ್ನು ವಕೀಲರು ಕೋರ್ಟ್​ಗೆ ಸಲ್ಲಿಸಿದ್ದಾರೆ.


Share this with Friends

Related Post