Sat. Jan 4th, 2025

ವರುಣಾ ನಾಡ ಕಚೇರಿಗೆ ಡಿಸಿ ರಾಜೇಂದ್ರ ದಿಢೀರ್‌ ಭೇಟಿ

Share this with Friends

ಮೈಸೂರು, ಜೂ.14: ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ವರುಣಾ ನಾಡ ಕಚೇರಿಗೆ ದಿಢೀರ್‌ ಭೇಟಿ ನೀಡಿ ಕಡತಗಳನ್ನು ಪರೀಶಿಲಿಸಿದರು.

ಪಹಣಿ, ಆಧಾರ್ ತಿದ್ದುಪಡಿ, ನೋಂದಣಿ ಸಂಬಂಧ ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ನಂತರ ನಗರದ ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದರು.

ಇದೇ‌ ವೇಳೆ ಪಕ್ಕದಲ್ಲಿದಲ್ಲಿರುವ ಆಹಾರ ಇಲಾಖೆಗೆ ಭೇಟಿ ನೀಡಿ ಉತ್ತಮ, ಗುಣಮಟ್ಟದ ಅಕ್ಕಿ, ರಾಗಿ ವಿತರಣೆ ಮಾಡುವಂತೆ ಡಾ.ರಾಜೇಂದ್ರ ಆದೇಶಿಸಿದರು.

ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ವೇಣುಗೋಪಾಲ್, ವಿನೋದ್ ಕುಮಾರ್ ಹಾಗೂ ಸಿಬ್ಬಂದಿ ಹಾಜರಿದ್ದರು.


Share this with Friends

Related Post