Sun. Apr 20th, 2025

ಅರೆಬೆಂದ ಯುವಕನ ಮೃತದೇಹ ಪತ್ತೆ:ಕೊಲೆ ಶಂಕೆ

Share this with Friends

ಮೈಸೂರು, ಜು. 20: ಜಿಲ್ಲೆಯ
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ
ಯುವಕನೊಬ್ಬನ ಅರೆಬೆಂದ ಮೃತದೇಹ ಪತ್ತೆಯಾಗಿದ್ದು,ಕೊಲೆ‌ ಶಂಕೆ ವ್ಯಕ್ತವಾಗಿದೆ.

ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮಡಹಳ್ಳಿ ಗ್ರಾಮದಲ್ಲಿ ಯುಕನ ದೇಹ ಪತ್ತೆಯಾಗಿದ್ದು,ದುಷ್ಕರ್ಮಿಗಳು ಕೊಲೆ ಮಾಡಿ ಸಾಕ್ಷಿ ನಾಶಪಡಿಸಲು ದೇಹಕ್ಕೆ ಬೆಂಕಿ ಇಟ್ಟು ನಂತರ ಜಮೀನಿಗೆ ಎಸೆದಿದ್ದಾರೆ.

ನಾಗರತ್ನಮ್ಮ ಎಂಬುವರ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದ್ದು,
ಮೃತನ ಬಲಗೈನಲ್ಲಿ ಶಶಿಕುಮಾರ ಎಂಬ ಹಚ್ಚೆ ಗುರುತಿದೆ.

ಕುತ್ತಿಗೆಯನ್ನ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ,ಯುವಕನ
ಎಡಬುಜದ ಬಳಿ ಶಸ್ತ್ರಚಿಕಿತ್ಸೆ ಮಾಡಿ ರಾಡ್ ಹಾಕಿರುವ ಗುರುತಿದೆ.

ಸ್ಥಳಕ್ಕೆ ಬೆಟ್ಟದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೃತನ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಬೆಟ್ಟದಪುರ ಠಾಣೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.


Share this with Friends

Related Post