ಬೆಂಗಳೂರು, ಮ.20: ಸಾಲಬಾದೆಯಿಂದ ಬೇಸತ್ತು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸುಮಾರು ಆರು ಗಂಟೆ ಸಮಯದಲ್ಲಿ ಬೆಂಗಳೂರಿನ ಜೆಪಿ ನಗರದಲ್ಲಿ ಈ ಘಟನೆ ನಡೆದಿದೆ.
ಜೆಪಿ ನಗರ ಮೂರನೆ ಹಂತ ಆರನೆ ಮುಖ್ಯ ರಸ್ತೆ ನಿವಾಸಿ ಸುಕನ್ಯಾ(48)ಮತ್ತು ಅವರ ಮಕ್ಕಳಾದ ನಿಖಿಲ್ ಮತ್ತು ನಿಶ್ಚಿತ್(28) (ಅವಳಿಜವಳಿ)ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.
ಸುಕನ್ಯಾ ಮನೆಯಲ್ಲೇ ಟ್ಯೂಷನ್ ಮಾಡುತ್ತಿದ್ದರು.ಅವರ ಪತಿ ಜಯಾನಂದ್
ಫ್ಯಾಕ್ಟರಿಯೊಂದನ್ನ ನಡೆಸ್ತಿದ್ದು,
ಇತ್ತೀಚೆಗೆ ಫ್ಯಾಕ್ಟರಿ ಲಾಸ್ ಆಗಿ ಕ್ಲೋಸ್ ಮಾಡಿದ್ದರು.
ಫ್ಯಾಕ್ಟರಿ ಲಾಸ್ ಹಿನ್ನೆಲೆಯಲ್ಲಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು,ಜತೆಗೆ ಆನಾರೋಗ್ಯ ಹಿನ್ನೆಲೆ ಮನೇಲ್ಲಿದ್ದರು
ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ನಿಶ್ಚಿತ್ ವರ್ಕ್ ಫ್ರಮ್ ಹೋಂ ಮಾಡಿ ದುಡಿಯುತ್ತಿದ್ದರು
ನಿಕಿತ್ ಕಳೆದ ನಾಲ್ಕೈದು ತಿಂಗಳಿಂದ ಕೆಲಸ ಬಿಟ್ಟು ಮನೇಲಿದ್ದ.
ಸಾಲ ಜಾಸ್ತಿಯಾಗಿರೋ ಹಿನ್ನೆಲೆಯಲ್ಲಿ ಸಾಲಗಾರರು ಬಂದು ಹಣ ವಾಪಸು ಕೇಳುತ್ತಿದ್ದರು.ನಿನ್ನೆ ಕೂಡ ಇಬ್ಬರು ಬಂದು ಸಾಲ ವಾಪಸ್ ಕೇಳಿದ್ದರು,ಬ್ಯಾಂಕ್ ನವರು ಕೂಡಾ ಬಂದಿದ್ದರು ಇದರಿಂದ ಮನೆಯವರು ತೀವ್ರ ಬೇಸರಗೊಂಡಿದ್ದರು.
ಬೆಳಿಗ್ಗೆ ಸುಕನ್ಯಾ ರೂಮ್ ಗೆ ಹೋಗಿ ಇಬ್ಬರು ಮಕ್ಕಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೊಗೆಯ ವಾಸನೆ ಬಂದಾಗ ಜಯಾನಂದ್ ಅವರು ರೂಮಿನ ಬಾಗಿಲು ಬಡಿದಿದ್ದಾರೆ,ಆದರೆ ಬಾಗಿಲು ತೆಗೆದಿಲ್ಲ. ಅಕ್ಕ ಅಕ್ಕ ಪಕ್ಕದವರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಪತ್ನಿ ಮಕ್ಕಳು ಸುಟ್ಟು ಹೋಗಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಜೆಪಿ ನಗರ ಠಾಣೆ ಪೋಲಿಸರು ಧಾವಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.