Sun. Dec 22nd, 2024

ಕುವೆಂಪು ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

Share this with Friends

ಮೈಸೂರು: ವಿಶ್ವ ಮಾನವ ಕುವೆಂಪು ಜಯಂತಿಯನ್ನು ಈ‌ ಬಾರಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.

ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಜಿಲ್ಲಾಡಳಿತದ ವತಿಯಿಂದ ಇಂದು ಹಮ್ಮಿಕೊಂಡಿದ್ದ ವಿಶ್ವ ಮಾನವ ಕುವೆಂಪು ಅವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಮೈಸೂರಿನ ಕಲಾಮಂದಿರದಲ್ಲಿ ಡಿಸೆಂಬರ್ 29 ರಂದು ಅದ್ದೂರಿಯಾಗಿ ಕುವೆಂಪು ಜಯಂತಿ ಆಚರಿಸಲು ನಿರ್ಧರಿಸಲಾಯಿತು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಂ ಡಿ ಸುದರ್ಶನ್ ಕಾರ್ಯಕ್ರಮದ ರೂಪ ರೇಷಗಳನ್ನು ತಿಳಿಸಿದರು.

ಅಧ್ಯಕ್ಷತೆಯನ್ನು ಅಪರ ಜಿಲ್ಲಾಧಿಕಾರಿ ಶಿವರಾಜ್ ರವರು ವಹಿಸಿದ್ದರು.

ಸಭೆಯಲ್ಲಿ ಕನ್ನಡ ಪರ ಹೋರಾಟಗಾರರಾದ ಬಿ ಎ. ಶಿವಶಂಕರ್, ಮೋಹನ್ ಕುಮಾರ್ ಗೌಡ, ಯಮುನಾ, ಭಾನು , ತೇಜೇಶ್ ಲೋಕೇಶ್ ಗೌಡ, ಅರವಿಂದ್ ಶರ್ಮಾ, ಹನುಮಂತಯ್ಯ ಸೇರಿದಂತೆ ಹಲವಾರು ಸಂಘಟನೆಗಳವರು ಭಾಗವಹಿಸಿದ್ದರು.


Share this with Friends

Related Post