Tue. Dec 24th, 2024

ದೋಷಪೂರಿತ ನಂಬ‌ರ್ ಪ್ಲೇಟ್: ಸವಾರ ಅಂದರ್

Share this with Friends

ಬೆಂಗಳೂರು,ಫೆ.27: ನಂಬರ್‌ ಪ್ಲೇಟ್‌ ತೆಗೆದಿಟ್ಟೋ ಅಥವಾ ದೋಷಪೂರಿತ ನಂಬರ್‌ ಪ್ಲೇಟ್ ಹೊಂದಿರುವವರಿಗೆ ತಕ್ಕ ಶಾಸ್ತಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಅದರಂತೆ ದ್ವಿಚಕ್ರ ವಾಹನಕ್ಕೆ ದೋಷಪೂರಿತ ನಂಬ‌ರ್ ಪ್ಲೇಟ್ ಅಳವಡಿಸಿ ಓಡಿಸುತ್ತಿದ್ದ ಸವಾರನನ್ನು ಪೊಲೀಸರು‌ ಬಂಧಿಸಿದ್ದಾರೆ.

ವೈಟ್‌ಫೀಲ್ಡ್‌ ನಿವಾಸಿ ಮೊಹಮ್ಮದ್ ಅಶ್ರಫ್ (26) ಬಂಧಿತ ಬೈಕ್ ಸವಾರ

ಫೆ.6ರಂದು ರಾತ್ರಿ ಸುಮಾರು 9.50 ರಲ್ಲಿ ತೂಬರಹಳ್ಳಿ ಮುಖ್ಯ ರಸ್ತೆಯಲ್ಲಿ ಈತ ದೋಷಪೂರಿತ ನೋಂದಣಿ ಫಲಕ ಅಳವಡಿಸಿ ಓಡಾಡುತ್ತಿದ್ದ.

ಇದನ್ನು ಗಮನಿಸಿದ ಸ್ಥಳೀಯರೊಬ್ಬರು ದ್ವಿಚಕ್ರ ವಾಹನ ಸಹಿತ ಫೋಟೋ ತೆಗೆದು ನಗರ ಸಂಚಾರ ಪೊಲೀಸರ ಎಕ್ಸ್‌ ಖಾತೆಗೆ ಟ್ಯಾಗ್ ಮಾಡಿ ಕ್ರಮಕ್ಕೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ವೈಟ್‌ ಫೀಲ್ಡ್ ಸಂಚಾರ ಠಾಣೆ ಪೊಲೀಸರು ಮೊಹಮ್ಮದ್ ಅಶ್ರಫ್‌ನನ್ನು ವಶಕ್ಕೆ ಪಡೆದು ನಂತರ ವರ್ತೂರು ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.


Share this with Friends

Related Post