Fri. Nov 1st, 2024

ದೆಹಲಿ ಏರ್‌ಪೋರ್ಟ್‌ ಮೇಲ್ಛಾವಣಿ ಕುಸಿದು ಒಬ್ಬ ಸಾವು

Share this with Friends

ನವದೆಹಲಿ,ಜೂ.28: ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಛಾವಣಿ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಮೃತರ ಕುಟುಂಬಕ್ಕೆ 20 ಲಕ್ಷ ರೂ‌ ಹಾಗೂ ಗಾಯಾಳುಗಳಿಗೆ 3 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಈ ವೇಳೆ ಸಚಿವರು ಘೊಷಿಸಿದರು.

ರಾಷ್ಟ್ರ ರಾಜಧಾನಿ ದೇಹಲಿಯಲ್ಲಿ ಭಾರೀ ಮಳೆಯಾಗಿದ್ದರಿಂದ ಇಂದು ಮುಂಜಾನೆ 5.30ರ ಸುಮಾರಿಗೆ ಟರ್ಮಿನಲ್‌ 1 ರಲ್ಲಿ ಛಾವಣಿ ಕುಸಿದಿದೆ.

ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಒಬ್ಬ ಮೃತಪಟ್ಟು,ಆರು ಮಂದಿ ಗಾಯಗೊಂಡಿದ್ದಾರೆ,ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಅವಘಡದ ತನಿಖೆಗಾಗಿ ನಾಗರಿಕ ವಿಮಾನಯಾನ ಸಚಿವಾಲಯವು ತಂಡವನ್ನು ರಚಿಸಿದೆ. ಘಟನೆಯಿಂದಾಗಿ ದೆಹಲಿಯ ಟರ್ಮಿನಲ್ ಒಂದರ 28 ವಿಮಾನಗಳ ಸಂಚಾರ ರದ್ದಾಗಿದೆ.

ಈಗ ಕುಸಿದಿರುವ ಛಾವಣಿ ಭಾಗವನ್ನು 2009 ರಲ್ಲಿ ನಿರ್ಮಿಸಲಾಗಿತ್ತು, ಈ ವರ್ಷದ ಮಾರ್ಚ್ ನಲ್ಲಿ ನವೀಕರಣ ಮಾಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ನವೀಕರಣಗೊಂಡ ಟರ್ಮಿನಲ್ ಉದ್ಘಾಟಿಸಿದ್ದರು. ಇದಾದ ಮೂರೇ ತಿಂಗಳಿಗೆ ಮೊದಲ ಮಳೆಗೇ ಛಾವಣಿ ಕುಸಿದು ಬಿದ್ದಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.


Share this with Friends

Related Post