Fri. Dec 27th, 2024

ಮಹಾರಾಜರ ಪ್ರತಿಮೆಗಳಿರುವ ವೃತ್ತದಲ್ಲಿ ನಾಮಫಲಕ ಅಳವಡಿಸಲು ಆಗ್ರಹ

Share this with Friends

ಮೈಸೂರು,ಜೂ.19: ಸಾಂಸ್ಕೃತಿಕ ನಗರಿಯಲ್ಲಿ ಮಹಾರಾಜರ ಪ್ರತಿಮೆಗಳಿರುವ ವೃತ್ತಗಳಲ್ಲಿ, ಪ್ರತಿಮೆ ಮುಂಭಾಗ ಮಹಾರಾಜರ ಹೆಸರಿನ ನಾಮಫಲಕಗಳನ್ನು ಅಳವಡಿಸಬೇಕೆಂದು ಕರ್ನಾಟಕ ಸೇನಾ ಪಡೆ ಒತ್ತಾಯಿಸಿದೆ.

ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನು ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ನೇತೃತ್ವದಲ್ಲಿ ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಲಾಯಿತು.

ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿಯಲ್ಲಿ ಮೈಸೂರಿನಲ್ಲಿರುವ ಮಹಾರಾಜರುಗಳ ಪ್ರತಿಮೆಗಳಿರುವ ಪ್ರಮುಖ ವೃತ್ತಗಳಲ್ಲಿ ಆಯಾ ಮಹಾರಾಜರುಗಳ ಹೆಸರಿನ ನಾಮಫಲಕವನ್ನು ಅಳವಡಿಸಬೇಕೆಂದು ಮನವಿ ಕೋರಿದರು

ಕೆ ಆರ್ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಪ್ರತಿಮೆ ಇದೆ. ಅಲ್ಲಿ ಪ್ರತಿಮೆಯ ಸುತ್ತ ನಾಲ್ಕೂ ಕಡೆಗಳಲ್ಲಿ ಕನ್ನಡದಲ್ಲಿ ಪ್ರಧಾನವಾಗಿ, ದೊಡ್ಡದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನ ನಾಮಫಲಕ ಹಾಕಬೇಕು.

ಅರಮನೆ ಮುಂಭಾಗದ ಕೋಟೆ ಆಂಜನೇಯ ವೃತ್ತದಲ್ಲಿ ನಾಲ್ವಡಿಯವರ ತಂದೆ ಹತ್ತನೇ ಚಾಮರಾಜ ಒಡೆಯರವರ ಪ್ರತಿಮೆ ಇದ್ದು ಅಲ್ಲಿ ಅವರ ಹೆಸರಿನ ನಾಮಪಲಕವನ್ನು ಹಾಕಬೇಕು.

ಹಾರ್ಡಿಂಜ್ ವೃತ್ತದಲ್ಲಿ ಇತ್ತೀಚೆಗೆ ನಿರ್ಮಾಣವಾದ ಜಯಚಾಮರಾಜ ಒಡೆಯರ್ ಪ್ರತಿಮೆ ಇದೆ. ಆಲ್ಲಿ ಅವರ ಹೆಸರಿನ ನಾಮಫಲಕಗಳನ್ನು ದೊಡ್ಡದಾಗಿ ಹಾಕಿ, ಅಲ್ಲಿ ಓಡಾಡುವ ಪ್ರವಾಸಿಗರಿಗೆ ಕಾಣುವ ಹಾಗೆ ನಾಮಫಲಕವನ್ನು ಹಾಕಬೇಕು

ಇದರಿಂದ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮೈಸೂರು ಮಹಾರಾಜರುಗಳು ಹೆಸರು ಹಾಗೂ ವೃತ್ತಗಳ ಪರಿಚಯವಾಗುತ್ತದೆ ಎಂದು ಈ‌ ವೇಳೆ ತೇಜೇಸ್ ಲೋಕೇಶ್ ಗೌಡ ತಿಳಿಸಿದರು.

ಕೂಡಲೇ ಈ ಮೂರು ವೃತ್ತಗಳಲ್ಲಿ ಮಹಾರಾಜರುಗಳ-ಹೆಸರುಗಳ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಆಯುಕ್ತರಲ್ಲಿ ಮನವಿ ಮಾಡಿದರು.

ಈ ವೇಳೆ ಶಿವಶಂಕರ್, ಸುರೇಶ್ ಗೋಲ್ಡ್, ಪ್ರಭುಶಂಕರ್, ರಾಧಾಕೃಷ್ಣ, ದೂರಸುರೇಶ್ ಮುಂತಾದವರು ಹಾಜರಿದ್ದರು.


Share this with Friends

Related Post