Tue. Dec 24th, 2024

ದೇವರಾಜೇಗೌಡ ಬಂಧನ-ಆಂಧ್ರದಿಂದ ಬಂದ ನಂತರ ಪ್ರತಿಕ್ರಿಯೆ: ಡಿಕೆಶಿ

Share this with Friends

ಬೆಂಗಳೂರು, ಮೇ.11: ಬಿಜೆಪಿ ನಾಯಕ ದೇವರಾಜೇಗೌಡರ ವಶ ಕುರಿತು
ಆಂಧ್ರ ಪ್ರದೇಶದಿಂದ ವಾಪಸ್‌‍ ಆದ ಬಳಿಕ ಮಾತನಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಳಗ್ಗೆ ಆಂಧ್ರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಇಂದು ಕಡಪಾಗೆ ಪ್ರಯಾಣಿಸುತ್ತಿದ್ದು, ಅಲ್ಲಿಂದ ಮಡಕಶಿರಾಗೆ ಭೇಟಿ ನೀಡಿ ಅಲ್ಲಿಂದ ವಾಪಸ್‌‍ ಬರಬೇಕಿದೆ,ಮನೆಯಲ್ಲಿ ಪತ್ರಿಕೆಗಳನ್ನು ಓದಲಾಗಿಲ್ಲ, ಇಡೀ ರಾತ್ರಿ ಬ್ಯೂಸಿಯಾಗಿದ್ದೆ, ಆಂಧ್ರ ಪ್ರದೇಶದಿಂದ ವಾಪಸ್‌‍ ಆದ ಬಳಿಕ ಎಲ್ಲಾ ಮಾತನಾಡುತ್ತೇನೆ ಎಂದು ಹೇಳಿದರು.

ಪೆನ್‌ಡ್ರೈವ್‌ನಲ್ಲಿ ವಿವಾದಿತ ವಿಡಿಯೋಗಳು ಬಹಿರಂಗವಾದ ಬಳಿಕ ಪತ್ರಿಕಾಗೋಷ್ಠಿ ಕರೆದು ದೇವರಾಜೇಗೌಡ, ಪೆನ್‌ಡ್ರೈವ್‌ ಬಿಡುಗಡೆಯ ಹಿಂದೆ ಡಿ.ಕೆ.ಶಿವಕುಮಾರ್‌ ಕೈವಾಡ ಇದೆ ಎಂಬ ಆರೋಪ ಮಾಡಿದ್ದರು.


Share this with Friends

Related Post