Tue. Dec 24th, 2024

ಪಂಚವಟಿಯಲ್ಲಿರಾಮನವಮಿ ಪ್ರಯುಕ್ತ ಭಕ್ತಿಗೀತೆ

Share this with Friends

ಮೈಸೂರು, ಏ.19: ಶ್ರೀ ರಾಮನವಮಿ ಪ್ರಯುಕ್ತ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ಪಂಚವಟಿ ಶ್ರೀ ಸೀತಾರಾಮ ದೇವಾಲಯದಲ್ಲಿ ಏ. 24ರ ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಸಂಜೆ ಖ್ಯಾತ ಸಂಗೀತಗಾರ ಆಕಾಶ್‌ ದೀಕ್ಷಿತ್ ಅವರಿಂದ ಭಕ್ತಿಗೀತೆಗಳ‌ ಕಾರ್ಯಕ್ರಮ ಏರ್ಪಾಡಿಸಲಾಗಿತ್ತು.

ಪವಮಾನ ಜಗದಾ ಪ್ರಾಣಾ…
ಬಾರೋ ಕೃಷ್ಣಯ್ಯಾ ನಿನ್ನಾ ಭಕ್ತರ ಮನೆಗೀಗಾ…
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಇನ್ನಷ್ಟು ನೆಮ್ಮದಿಯು ಎಲ್ಲಿಹುದೊ ರಾಮಾ…
ವೆಂಕಟಾಚಲ ನಿಲಯಮ್ ವೈಕುಂಠ‌ಪುರವಾಸಂ…ಮತ್ತಿತರ ಭಕ್ತಿಗೀತೆಗಳು ಹಾಗೂ ಭಾವಗೀತೆ
ಕಾಣದಾ ಕಡಲಿಗೇ ಹಂಬಲಿಸಿದೇ ಮನ…
ಹೀಗೆ ಹಲವಾರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಜನರ ಮನಸೆಳೆದರು.

ನಂತರ ಹಲವಾರು ಭಕ್ತರು ಶ್ರೀರಾಮಚಂದ್ರನ ಸನ್ನಿಧಿಯಲ್ಲಿ ಅರ್ಚನೆ ಮಾಡಿಸಿ ಮಂಗಳಾರತಿ ಪಡೆದರು.

ತದನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.


Share this with Friends

Related Post