ಬೆಂಗಳೂರು, ಜೂ.7: ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಮನಾ ಪ್ರಾಜೆಕ್ಟ್ಸ್ ಬೆಂಗಳೂರಿನ ತಿಪ್ಪಸಂದ್ರದಲ್ಲಿರುವ ಅನುದಾನಿತ ಶ್ರೀ ಶಾರದಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅತ್ಯಾಧುನಿಕ ಡಿಜಿಟಲ್ ಕ್ಲಾಸ್ ರೂಮ್ ಉದ್ಘಾಟಿಸಿದೆ.
ಮನಾ ತನ್ನ ಸಾಮಾಜಿಕ ಜವಾಬ್ದಾರಿ ಭಾಗವಾಗಿ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಲುವಾಗಿ ಇಂದು ಶ್ರೀ ಶಾರದಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ (ಎಸ್ ಎಸ್ ವಿ ಎಂ)ಯಲ್ಲಿ ಅತ್ಯಾಧುನಿಕ ಡಿಜಿಟಲ್ ಕ್ಲಾಸ್ ರೂಮ್ ಉದ್ಘಾಟಿಸಿದೆ.
ಡಿಜಿಟಲ್ ಶಿಕ್ಷಣವನ್ನು ಒದಗಿಸುವ ಮತ್ತು ಈ ಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಮನಾ ಹೊಂದಿದೆ.
ಸಮಾರಂಭದಲ್ಲಿ ಮನಾ ಪ್ರಾಜೆಕ್ಟ್ಸ್ ಮತ್ತು ಎಸ್ ಎಸ್ ವಿ ಎಂ ಶಾಲೆಯ ಆಡಳಿತ ಮಂಡಳಿಯ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಮನಾ ಪ್ರಾಜೆಕ್ಟ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಿ ಕಿಶೋರ್ ರೆಡ್ಡಿ, ಈ ಡಿಜಿಟಲ್ ಕ್ಲಾಸ್ ರೂಮ್ ನಮ್ಮ ಸಮುದಾಯವನ್ನು ಉನ್ನತೀಕರಿಸಲು ಎಂಜಿನಿಯರಿಂಗ್ ಪರಿಹಾರಗಳನ್ನು ಬಳಸುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಯುವ ಮನಸ್ಸುಗಳನ್ನು ಡಿಜಿಟಲ್ ಸಾಕ್ಷರರಾಗಿ ಮಾಡುವ ಮೂಲಕ ನಾವು ಅವರನ್ನು ಭವಿಷ್ಯದ ದಿನಗಳಿಗೆ ಸಿದ್ಧಗೊಳಿಸುತ್ತಿದ್ದೇವೆ, ಜೊತೆಗೆ ಭವಿಷ್ಯ ರೂಪಿಸಲು ಸಜ್ಜುಗೊಳಿಸುತ್ತಿದ್ದೇವೆ” ಎಂದು ತಿಳಿಸಿದರು.
ಈ ಡಿಜಿಟಲ್ ಕ್ಲಾಸ್‌ರೂಮ್ ನಲ್ಲಿ ಉತ್ತಮ ಶಿಕ್ಷಣತಜ್ಞರ ನೇತೃತ್ವದಲ್ಲಿ ನೇರ ಸಂವಾದಾತ್ಮಕ ಆನ್‌ಲೈನ್ ತರಗತಿಗಳು ನಡೆಯಲಿವೆ.
ವರ್ಕ್‌ಶೀಟ್‌ಗಳು ಒಳಗೊಂಡಂತೆ ಅತ್ಯುತ್ತಮ ಗ್ರಂಥಾಲಯ, ಸಂವಾದಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಿಜಿಟಲ್ ಕ್ಲಾಸ್ ರೂಮ್ ನ ಸಾಮರ್ಥ್ಯಗಳನ್ನು ಪ್ರದರ್ಶಿಸಲಾಯಿತು. ಕಲಿಕೆಯನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸಲಾಯಿತು. ಶಿಕ್ಷಣತಜ್ಞರು ಮತ್ತು ಮನಾ ಪ್ರತಿನಿಧಿಗಳು ಈ ಉಪಕ್ರಮದ ದೀರ್ಘಕಾಲದ ಪರಿಣಾಮಗಳ ಕುರಿತು ಚರ್ಚೆ ನಡೆಸಿದರು.
ಇದೇ ವೇಳೆ ಮನಾ ಪ್ರಾಜೆಕ್ಟ್ಸ್ ವತಿಯಿಂದ 5 ಸಸಿಗಳನ್ನು ನೆಡಲಾಯಿತು, ಜೊತೆಗೆ ಮನಾ 8, 9 ಮತ್ತು 10 ನೇ ತರಗತಿಯ ಟಾಪ್ 3 ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆಗೆ ಮತ್ತು ಕಲಿಕೆಯಲ್ಲಿನ ಬದ್ಧತೆಗೆ ಗೌರವ ಸಲ್ಲಿಸಲಾಯಿತು.