Tue. Dec 24th, 2024

ಶ್ರೀ ಪೇಜಾವರ ವಿದ್ಯಾರ್ಥಿ ನಿಲಯದ ಮಕ್ಕಳಿಗೆ ಹಣ್ಣು, ಲೇಖನ ಸಾಮಗ್ರಿ ವಿತರಣೆ

Share this with Friends

ಮೈಸೂರು, ಆ.12: ನಗರದ ಜೆ.ಪಿ.ನಗರದಲ್ಲಿರುವ ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿಗಳು ಹಾಗೂ ಹಣ್ಣುಗಳನ್ನು ವಿತರಿಸಲಾಯಿತು.

ಈ ಮೂಲಕ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಮಾಜಿ ಸಚಿವ ಸಾ.ರಾ. ಮಹೇಶ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ವೇಳೆ ಶ್ರೀ ಪೇಜಾವರ ಸಾರ್ವಜನಿಕ ನಿಲಯದ ಪುಟ್ಟಣ್ಣ,ಮೈಸೂರು ನಗರ ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ,ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಸಿ.ಜೆ. ಪುನೀತ್, ಸುಚಿಂದ,ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ಚಂದ್ರಶೇಖರ್, ಮಹೇಶ್, ಮಹದೇವ್,ಎಸ್‌.ಪಿ. ಅಕ್ಷಯ್ ಪ್ರಿಯಾದರ್ಶನ್,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.


Share this with Friends

Related Post