Mon. Dec 23rd, 2024

ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ಶಾಲಾ ಮಕ್ಕಳಿಗೆ ಓದುವ ಸಾಮಗ್ರಿ ವಿತರಣೆ

Share this with Friends

ಮೈಸೂರು,ಜು.31: ಮೈಸೂರಿನ ಅಕ್ಕನ ಬಳಗ ಶಾಲಾ ಮಕ್ಕಳಿಗೆ ಕಾಂಗ್ರೆಸ್ ಯುವ ಮುಖಂಡ ದಿವಂಗತ ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ದಿನೇಶ್ ಗುಂಡೂರಾವ್ ಅಭಿಮಾನಿ ಬಳಗದ ವತಿಯಿಂದ ಓದುವ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಕೆ ರಘುರಾಮ್ ವಾಜಪೇಯಿ ಅವರು ಮಾತನಾಡಿ, ರಾಕೇಶ್ ಅವರು ಭವಿಷ್ಯದ ಭರವಸೆಯ ಉತ್ತಮ ನಾಯಕರಾಗಿದ್ದರು, ತಂದೆ ತಾಯಿಯ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು,
ಧಾರ್ಮಿಕ ವ್ಯಕ್ತಿತ್ವವನ್ನು ಅವರ ಗ್ರಾಮದ ಹಿರಿಯರಿಂದ ರೂಢಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಅನೇಕ ಸಂದರ್ಭದಲ್ಲಿ ಭೇಟಿಯಾದಾಗ ಅವರ ಮುಂದಿನ ಕನಸುಗಳನ್ನು ವ್ಯಕ್ತಪಡಿಸುತ್ತಿದ್ದರು,ಚಿಕ್ಕ ವಯಸ್ಸಿನಲ್ಲೇ ಜನಸೇವೆಯ ಮೂಲಕ ಯುವಕರ ಸ್ಫೂರ್ತಿಯಾಗಿ ರಾಜ್ಯದ ವಿವಿದೆಡೆ ಲಕ್ಷಾಂತರ ಅಭಿಮಾನಗಳನ್ನು ಹೊಂದಿದ್ದರು, ಒಬ್ಬ ಯಶಸ್ವಿ ರಾಜಕರಣಿಯಾಗುವ ಸಂಧರ್ಭದಲ್ಲಿ ಇಹಲೋಕ ತ್ಯಜಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆಸಲಾಗದ ನಷ್ಟ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ,ರಾಕೇಶ್ ಅಕಾಲಿಕ ಮರಣ ಸಾವಿರಾರು ಅಭಿಮಾನಿಗಳಿಗೆ ತುಂಬಾಲರಾದ ನಷ್ಟವಾಗಿದೆ, ಪ್ರತಿವರ್ಷ ಸಾಮಾಜಿಕ ಸೇವ ಕಾರ್ಯಗಳ ಮೂಲಕ ಅವರನ್ನು ಸ್ಮರಿಸಲಾಗುವುದು ಎಂದು ತಿಳಿಸಿದರು.

ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಗುಂಡುರಾವ್ ಅಭಿಮಾನಿ ಬಳಗದ ಅಧ್ಯಕ್ಷ ವಿನಯ್ ಕಣಗಾಲ್, ಮಾಜಿ ಮೂಡಾ ಸದಸ್ಯರಾದ ಲತಾ ಮೋಹನ್,
ರವಿತೇಜ, ರಾಜೇಶ್ ಪಳನಿ, ಪವನ್ ಸಿದ್ದರಾಮು, ಶಾಲೆಯ ಮುಖ್ಯ ಶಿಕ್ಷಕರಾದ ಸುಗುಣಾವತಿ,ಮಿರ್ಲೆ ಪನೀಶ್, ರಾಕೇಶ್, ಭರತ್, ಡಿ ಕೆ ನಾಗಭೂಷಣ್, ಚಕ್ರಪಾಣಿ, ಮತ್ತಿತರರು ಹಾಜರಿದ್ದರು.


Share this with Friends

Related Post