Mon. Dec 23rd, 2024

ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಹೊಲಿಗೆ ಯಂತ್ರಗಳ ವಿತರಣೆ

Share this with Friends

ಮೈಸೂರು, ಆ.24 : ನಗರದ ಲಯನ್ಸ್ ಅಂಬಾಸಿಡರಸ್ ಸಂಸ್ಥೆಯಿಂದ ಮಾಸಿಕ ಸೇವಾ ಕಾರ್ಯಕ್ರಮದ ಅಡಿಯಲ್ಲಿ ಸ್ವ ಉದ್ಯೋಗವನ್ನು ಮಾಡುವ ಉದ್ದೇಶದಿಂದ ಮೂರು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ನೀಡಿದರು.

ಈ ಹೊಲಿಗೆ ಯಂತ್ರಗಳ ಪ್ರಯೋಜಕತ್ವ ಮಾಜಿ ಜಿಲ್ಲಾ ರಾಜ್ಯಪಾಲರುಗಳಾದ ಲಯನ್ ಕೆ ದೇವೆಗೌಡ, ಲಯನ್ ಎಸ್ . ರಾಮಚಂದ್ರನ್, ಜಿಲ್ಲಾ ಅಧ್ಯಕ್ಷರಾದ ಲಯನ್ ಸಿ.ಆರ್ .ದಿನೇಶ್ , ಭೌತಶಾಸ್ತ್ರ ಉಪನ್ಯಾಸಕರಾದ ಹೆಚ್ .ಎಸ್ ರಾಮನುಜ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ವಿ.ಶ್ರೀಧರ್, ಕಾರ್ಯದರ್ಶಿ ಪಿ.ಮಲ್ಲಿಕಾರ್ಜುನಪ್ಪ, ಖಜಾಂಚಿ ಹೆಚ್ .ಆರ್ .ರವಿಚಂದ್ರ, ಪ್ರಾಂತೀಯ ಅಧ್ಯಕ್ಷ ಕೆ.ಆರ್ .ಭಾಸ್ಕರಾನಂದ, ವಲಯ ಅಧ್ಯಕ್ಷ ಹೆಚ್ .ಸಿ. ಕಾಂತಾರಾಜು ಮತ್ತು ಲಯನ್ ವಾಸು ಉಪಸ್ಥಿತರಿದ್ದರು.


Share this with Friends

Related Post