Mon. Dec 23rd, 2024

ಖುರ್ಚಿಯಿಂದ ಇಳಿಸಲು ಡಿಕೆಶಿ ಸಿಡಿ ಬಿಡ್ತಾರೆ, ಸಿದ್ದರಾಮಯ್ಯನವರೇ ಹುಷಾರು:ರಾಜೂ ಗೌಡ

Share this with Friends

ಸುರಪುರ,ಮೇ.3: ಡಿ.ಕೆ. ಶಿವಕುಮಾರ್ ಪೆನ್ ಡ್ರೈವ್, ಸಿಡಿ ವಿಶ್ವವಿದ್ಯಾಲಯ ತೆರೆದಿದ್ದಾರೆ.
ಖುರ್ಚಿಯಿಂದ ಇಳಿಸಲು ಸಿಡಿ ಬಿಡ್ತಾರೆ, ಸಿದ್ದರಾಮಯ್ಯನವರೇ‌ ಹುಷಾರು ಎಂದು ಬಿಜೆಪಿ ಅಭ್ಯರ್ಥಿ ರಾಜೂಗೌಡ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಅವರಿಗೆ ಎದುರಾಳಿಗಳನ್ನು ಹೇಗೆ ಬಗ್ಗು ಬಡಿಯಬೇಕು ಎಂದು ಗೊತ್ತಿದೆ. ಕೆಲವರಿಗೆ ಬೆದರಿಕೆಯ ಅಸ್ತ್ರ, ಕೆಲವರಿಗೆ ಸಿಡಿ ಅಸ್ತ್ರ ಬಳಸುತ್ತಾರೆ ಎಂದು ಸುರಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೂಗೌಡ ವಾಗ್ದಾಳಿ ನಡೆಸಿದರು.

ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹೀಗೆ ಮಾಡಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ತಯಾರಿಸಿಕೊಂಡು ಮನೆಗೆ ಕಳುಹಿಸಿದರು. ಸಮಯ ಬಂದಾಗ ಎದುರಾಳಿಗೆ ಏನು ಕೊಡಬೇಕು ಅದನ್ನು ಕೊಡುತ್ತಾರೆ. ಈಗ ಪ್ರಜ್ವಲ್ ವಿರುದ್ಧ ಸಿಡಿ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಆರೋಪಿಸಿದರು.

ಡಿ.ಕೆ ಶಿವಕುಮಾರ ಸಿಡಿ ಮಾಡೋದ್ರಲ್ಲಿ ಎಕ್ಸ್‌ಪರ್ಟ್, ಇಂತಹವರನ್ನು ಪಕ್ಕದಲ್ಲಿ ಕರೆದುಕೊಂಡು ಓಡಾಡಬೇಡಿ ಸಿದ್ದರಾಮಯ್ಯೋರೇ, ನೀವು ಹುಷಾರಾಗಿರಿ ಎಂದು ಹೇಳಿದರು.

ಡಿಕೆಶಿ ಅಣ್ಣನಿಗೆ ಸಿಎಂ ಆಗಬೇಕೆಂಬ ಆಸೆ, ಅವರಿಗೆ ನಿಮ್ಮ ಕುರ್ಚಿಯ ಮೇಲೆ ಕಣ್ಣು, ಮುಖ್ಯಮಂತ್ರಿ ಆಗಲು ಡಿಕೆ ಏನು ಬೇಕಾದರೂ ಮಾಡೋಕೆ ಸಿದ್ದರಿದ್ದಾರೆ. ಬೇಕಾದ್ರೆ ಯತೀಂದ್ರ ಅವರದ್ದೂ ಒಂದು ಸಿಡಿ ಬಿಡುತ್ತಾರೆ. ಭ್ರಷ್ಟಾಚಾರದ್ದೋ ಅಥವಾ ಇನ್ಯಾವುದೋ ಒಂದು ಸಿಡಿ ಬಿಡುತ್ತಾರೆ ಎಂದು ಸ್ಪೋಟಕ ಹೇಳಿಕೆ ನೀಡಿದರು.


Share this with Friends

Related Post