ಮೈಸೂರು: ಎಲ್ಲರೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸಮಾಜ ಸೇವೆಯಲ್ಲಿ ತೊಡಗಿ ಕೊಳ್ಳಬೇಕು ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಸಲಹೆ ನೀಡಿದರು.
ಮೈಸೂರಿನ ವಿಜಯನಗರದಲ್ಲಿರುವ ಮಲೆ ಮಾದೇಶ್ವರ ಸಂಸ್ಥೆಯ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಯುವ ಜನತೆ ಸಿನಿಮಾ, ಟಿವಿ. ಹಾಗೂ ಮೊಬೈಲ್‌ಗಳಿಗೆ ಹೆಚ್ಚು ಆಕರ್ಷಿತವಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಇದು ಸಮಾಜದ ಒಳಿತಿಗೆ ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.
ಮೈಸೂರು ಸಾಂಸ್ಕೃತಿಕ ಕಲಾವಿದರ ತವರೂರು ಜೊತೆಯಲ್ಲೇ ಇತ್ತಿಚೆಗೆ ಯುವ ಉದ್ಯಮಿಗಳ ನಗರಿಯಾಗಿಯೂ ಬೆಳೆಯುತ್ತಿರುವುದು ಸಂತಸದ ತಂದಿದೆ ಎಂದು ತಿಳಿಸಿದರು.
ಗಾಯನ ತಂಡವನ್ನ ಸಂಘಟಿಸಿ ಹವ್ಯಾಸಿ ಕಲಾವಿದರನ್ನ ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸುತ್ತಿರುವ ಮಲೆ ಮಾದೇಶ್ವರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ನಾರಾಯಣಗೌಡ ಹೇಳಿದರು
ಮೂಡ ಮಾಜಿ ಸದಸ್ಯೆ ಲಕ್ಷ್ಮೀದೇವಿ ಮಾತನಾಡಿ,ಮಲೆ ಮಾದೇಶ್ವರ ಸಂಸ್ಥೆ ಕಳೆದ 8 ವರ್ಷಗಳಿಂದ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸುತ್ತ ಬಂದಿರುವುದು ಹೆಮ್ಮೆಯ ವಿಷಯ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ನಿರೂಪಕ ಮಂಜು ಸಿ ಶಂಕರ್ ಮಾತನಾಡಿ
ಯುವಕರೆಲ್ಲರೂ ಸಂಘಟಿತರಾಗಿ ಸಮಾಜಕ್ಕಾಗಿ ದುಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ , ನಿಮ್ಮ ಸಂಘಟನೆ ಜೊತೆ ಸದಾ ನಾವಿರುತ್ತೇವೆ ಎಂದು ಭರವಸೆ ನೀಡಿದರು.
ಎಸ್ ಇ ಗಿರೀಶ್ (ಆರೋಗ್ಯ ಕ್ಷೇತ್ರ), ಡಾಕ್ಟರ್ ರೇಖಾ ಅರುಣ್ (ಸಂಗೀತ ಕ್ಷೇತ್ರ) ಎಂ ಡಿ ಪಾರ್ಥಸಾರಥಿ (ಚಿತ್ರರಂಗ ಕ್ಷೇತ್ರ), ಎ ರವಿ (ಸಾಮಾಜಿಕ ಕ್ಷೇತ್ರ), ರಾಜೇಶ್ ಪಳನಿ (ಉದ್ಯಮ ಕ್ಷೇತ್ರ) ಪ್ರಕಾಶ್ ಪ್ರಿಯದರ್ಶನ್ (ಸಂಘಟನಾ ಕ್ಷೇತ್ರ) ಅವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅಜಯ್ ಶಾಸ್ತ್ರಿ, ಮಲೆ ಮಾದೇಶ್ವರ ಸಂಸ್ಥೆಯ ಅಧ್ಯಕ್ಷ ಮಹಾನ್ ಶ್ರೇಯಸ್, ಎಸ್ ಎನ್ ರಾಜೇಶ್, ರಾಕೇಶ್, ಗಾಯಕ ಗುರುರಾಜ್ ಮತ್ತಿತರರು ಹಾಜರಿದ್ದರು.